ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ನಿಕೋಲಸ್ ಹೋರಾಟ ವ್ಯರ್ಥ- ಚೆನ್ನೈ ಭರ್ಜರಿ ಗೆಲುವು

ಮುಂಬೈ: ಮುಖೇಶ್ ಚೌದ್ರಿ ಅದ್ಭುತ ಬೌಲಿಂಗ್ ‌ಪ್ರದರ್ಶನ, ಋತುರಾಜ್ ಗಾಯಕ್ವಾಡ ಹಾಗೂ ಡೆವೊನ್ ಕಾನ್ವೆ ಭರ್ಜರಿ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 13 ರನ್‌ಗಳಿಂದ ಗೆಲುವು ಸಾಧಿಸಿದೆ.ಪುಣೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 46ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.‌ ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 2 ವಿಕೆಟ್ ನಷ್ಟಕ್ಕೆ 202 ರನ್ ಚಚ್ಚಿತ್ತು.

ಬಳಿಕ ಬ್ಯಾಟಿಂಗ್ ‌ಮಾಡಿದ ಹೈದರಾಬಾದ್ ತಂಡವು 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಸೋಲಿಗೆ ಶರಣಾಗಿದೆ. ಹೈದರಾಬಾದ್ ಪರ ನಿಕೋಲಸ್ ಪೂರನ್ ಅಜೇಯ 64 ರನ್, ನಾಯಕ ಕೇನ್ ವಿಲಿಯಮ್ಸನ್ 47 ರನ್ ಹಾಗೂ ಅಭಿಷೇಕ್ ಶರ್ಮಾ 39 ರನ್‌ ಗಳಿಸಿದರು.‌ ಇನ್ನು ಚೆನ್ನೈ ಪರ ಮುಖೇಶ್ ಚೌದ್ರಿ 4 ವಿಕೆಟ್ ಕಿತ್ತು ಮಿಂಚಿದರು. ಇದಕ್ಕೂ ಮುನ್ನ ಚೆನ್ನೈ ಪರ ಋತುರಾಜ್ ಗಾಯಕ್ವಾಡ 99 ರನ್, ಡೆವೊನ್ ಕಾನ್ವೆ ಅಜೇಯ 85 ರನ್, ನಾಯಕ ಧೋನಿ 8 ರನ್ ಗಳಿಸಿದ್ದರು.

Edited By : Nirmala Aralikatti
PublicNext

PublicNext

01/05/2022 11:16 pm

Cinque Terre

41.23 K

Cinque Terre

0

ಸಂಬಂಧಿತ ಸುದ್ದಿ