ಮುಂಬೈ: ರಿಯಾನ್ ಪರಾಗ್ ಏಕಾಂಗಿ ಹೋರಾಟದ ಅರ್ಧಶಕತದ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 145 ರನ್‌ಗಳ ಗುರಿ ನೀಡಿದೆ.
ಪುಣೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 39ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸ್ಸಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ. ಆರ್‌ಆರ್ ಪರ ರಿಯಾನ್ ಪರಾಗ್ 56 ರನ್ (31 ಎಸೆತ), ನಾಯಕ ಸಂಜು ಸ್ಯಾಮ್ಸನ್ 27 ರನ್ ಗಳಿಸಿದರು. ಈ ಬಾರಿಯ ಆವೃತ್ತಿಯಲ್ಲಿ ಮೂರು ಶತಕ ದಾಖಲಿಸಿರುವ ಜೋಸ್ ಬಟ್ಲರ್ 8 ರನ್‌ಗೆ ವಿಕೆಟ್ ಕಳೆದುಕೊಂಡರು.
ಇನ್ನು ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್ವುಡ್ ಹಾಗೂ ವನಿಂದು ಹಸರಂಗ ಡಿ ಸಿಲ್ವ ತಲಾ 2 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದುಕೊಂಡರು.
PublicNext
26/04/2022 09:27 pm