ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್, ಅಭಿನವ್ ಮನೋಹರ್ ಅಬ್ಬರದ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 193 ರನ್‌ಗಳ ಗುರಿ ನೀಡಿದೆ.
ಮುಂಬೈನ ಡಿ.ವೈ. ಪಾಟೀಲ ಸ್ಟೇಡಿಯಂನಲ್ಲಿ ಐಪಿಎಲ್ 15ನೇ ಆವೃತ್ತಿಯ ಭಾಗವಾಗಿ ಇಂದು ನಡೆಯುತ್ತಿರುವ 24ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ.
ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ 87 ರನ್ (52 ಎಸೆತ), ಅಭಿನವ್ ಮನೋಹರ್ 43 ರನ್ (28 ಎಸೆತ) ಹಾಗೂ ಡೇವಿಡ್ ಮಿಲ್ಲರ್ 31 ರನ್ (14 ಎಸೆತ) ಚಚ್ಚಿದರು. ಇನ್ನು ರಾಜಸ್ಥಾನ್ ರಾಯಲ್ಸ್ ಪರ ಕುಲದೀಪ್ ಸೇನ್, ಯಜುವೇಂದ್ರ ಚಾಹಲ್ ಹಾಗೂ ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದುಕೊಂಡರು.
PublicNext
14/04/2022 09:25 pm