ಮುಂಬೈ: ಮುಂಬೈನ ವಾಂಖೆಡೆ ಮೈದಾನದಲ್ಲಿ ನಿನ್ನೆ (ಸೋಮವಾರ) ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡವು 5 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕೃನಾಲ್ ಮತ್ತು ಹಾರ್ದಿಕ್ ಅವರನ್ನ ವಿಭಿನ್ನ ತಂಡಗಳಲ್ಲಿ ನೋಡಲಾಯಿತು.
ಹಾರ್ದಿಕ್ ವಿಕೆಟ್ ಪಡೆಯುತ್ತಿದ್ದಂತೆ ಕೃನಾಲ್ ಯಾವುದೇ ರೀತಿಯಲ್ಲಿ ಸಂಭ್ರಮಿಸಿದೇ ತನ್ನ ಮುಖವನ್ನು ಮರೆಮಾಚಿಕೊಂಡರು. ನಂತರ ನಗುತ್ತಿರುವುದನ್ನು ಕಂಡುಬಂದಿತು. ವಿಕೆಟ್ ಪಡೆದಾಗ ಸಾಮಾನ್ಯವಾಗಿ ಅಗ್ರೆಸ್ಸಿವ್ ಆಗಿ ಕಾಣುವ ಕೃನಾಲ್ ಶಾಂತ ರೀತಿಯಲ್ಲಿ ಹೆಜ್ಜೆ ಹಾಕಿದರು. ಇದು ನೋಡುಗರಿಗೆ ಆಶ್ಚರ್ಯ ಉಂಟುಮಾಡಿತು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
PublicNext
29/03/2022 07:41 am