ಧರ್ಮಶಾಲಾ: ಶ್ರೇಯಸ್ ಅಯ್ಯರ್ ಅಬ್ಬರದ ಅರ್ಧಶತಕದಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ 6 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಭಾರತ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. 147 ರನ್ಗಳ ಗುರಿ ಬೆನ್ನತ್ತಿದ ಭಾರತ 19 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 148 ರನ್ ದಾಖಲಿಸಿ ಗೆದ್ದು ಬೀಗಿದೆ. ಭಾರತದ ಪರ ಶ್ರೇಯಸ್ ಅಯ್ಯರ್ ಅಜೇಯ 73 ರನ್, ರವೀಂದ್ರ ಜಡೇಜಾ ಅಜೇಯ 22 ರನ್ ಹಾಗೂ ದೀಪಕ್ ಹೂಡಾ 21 ಗಳಿಸಿ ತಂಡದ ಗೆಲುವಿಗೆ ಆಸರೆಯಾದರು.
ಇದಕ್ಕೂ ಮುನ್ನ ಲಂಕಾ ಪರ ನಾಯಕ ದಾಸುನ್ ಶನಕ 74 ರನ್ (38 ಎಸೆತ, 9 ಬೌಂಡರಿ, 2 ಸಿಕ್ಸ್) ಸಿಡಿಸಿದ್ದರೆ, ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ 25 ರನ್ ಗಳಿಸಿದ್ದರು. ಉಳಿದಂತೆ ಆರಂಭಿಕ ಬ್ಯಾಟರ್ಗಳು ಬ್ಯಾಟಿಂಗ್ ವೈಫಲ್ಯ ಮೆರೆದಿದ್ದರು. ಇನ್ನು ಭಾರತದ ಪರ ಅವೇಶ್ ಖಾನ್ 2 ಉರುಳಿಸಿದ್ದರೆ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
PublicNext
27/02/2022 10:37 pm