ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SL 3rd T20: ಲಂಕಾ ನಾಯಕನ ಏಕಾಂಗಿ ಹೋರಾಟ- ಭಾರತಕ್ಕೆ 147 ರನ್‌ಗಳ ಗುರಿ

ಧರ್ಮಶಾಲಾ: ನಾಯಕ ದಾಸುನ್ ಶನಕ ಸಮಯೋಚಿತ ಅರ್ಧಶತಕ ಹಾಗೂ ಏಕಾಂಗಿ ಹೋರಾಟದಿಂದ ಶ್ರೀಲಂಕಾ ತಂಡವು ಭಾರತಕ್ಕೆ 147 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 146 ರನ್‌ ಗಳಿಸಿದೆ. ಲಂಕಾ ಪರ ನಾಯಕ ದಾಸುನ್ ಶನಕ 74 ರನ್ (38 ಎಸೆತ, 9 ಬೌಂಡರಿ, 2 ಸಿಕ್ಸ್‌) ಸಿಡಿಸಿದರೆ, ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ 25 ರನ್‌ ಗಳಿಸಿದರು. ಉಳಿದಂತೆ ಆರಂಭಿಕ ಬ್ಯಾಟರ್‌ಗಳು ಬ್ಯಾಟಿಂಗ್ ವೈಫಲ್ಯ ಮೆರೆದರು.

ಇನ್ನು ಭಾರತದ ಪರ ಅವೇಶ್ ಖಾನ್ 2 ವಿಕೆಟ್ ಉರುಳಿಸಿದರೆ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

Edited By : Vijay Kumar
PublicNext

PublicNext

27/02/2022 08:54 pm

Cinque Terre

51.12 K

Cinque Terre

0

ಸಂಬಂಧಿತ ಸುದ್ದಿ