ಭಾರತೀಯ ಕ್ರಿಕೆಟ್ ತಂಡದಲ್ಲಿ ಎಲ್ಲೂ ಸರಿ ಇದಿಯೇ..? ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ. ಇಲ್ಲಿ ಯಾವುದೂ ಸರಿಯಿಲ್ಲ ಅನ್ನೋದೇ ಆ ಉತ್ತರ. ಹೌದು. ಬಿಸಿಸಿಐ ಮತ್ತು ಕ್ರಿಕೆಟ್ ಆಟಗಾರರ ನಡುವೆ ತಿಕ್ಕಾಟ ಇದ್ದೇ ಇದೆ. ಅದರ ಮಧ್ಯೆ ಟೀಂ ಇಂಡಿಯಾದ ಹಾಲಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆರನ್ನ ಮನೆಗೆ ಕಳಿಸೋ ಎಲ್ಲ ಪ್ಲಾನ್‌ಗಳು ತೆರೆಮರೆಯಲ್ಲಿ ನಡೀತಾ ಇದೆ.
ಬೌಲಿಂಗ್ ಕೋಚ್ ಪರಾಸ್ ಬಾಂಬ್ರೆ ಅತ್ಯದ್ಭುತ ಕೋಚ್ ಆಗಿದ್ದಾರೆ. ಅಂಡರ್-19 ಇಂಡಿಯನ್ ಟೀಮ್‌ನ ಮಾಜಿ ಬೌಲಿಂಗ್ ಕೋಚ್ ಕೂಡ ಹೌದು.ಸದ್ಯ ಟೀಂ ಇಂಡಿಯಾದ ಕೋಚ್ ಆಗಿದ್ದಾರೆ. ಇವರ ಜಾಗಕ್ಕೆ ಅಜಿತ್ ಅಗರಕರ್ ರನ್ನ ತರೋ ಪ್ಲಾನ್ ಈಗಾಗಲೇ ಶುರು ಆಗಿದೆ.
ಸದ್ಯದ ಮಾಹಿತಿ ಪ್ರಕಾರ, ಬೌಲಿಂಗ್ ಕೋಚ್ ಮಾಂಬ್ರೆಗೆ ಏಕ ದಿನ ಪಂದ್ಯದ ಅನುಭವ ಕಡಿಮೆ ಇದೆ. ಅಂಡರ್-19 ತಂಡಕ್ಕೆ ಮಾತ್ರ ಮಾಂಬ್ರೆ ಸೂಕ್ತ ಅನ್ನೋದೇ ಹಿರಿಯ ಆಟಗಾರರ ವಾದವಾಗಿದೆ.
ಅಲ್ಲಿಗೆ ಟೀಂ ಇಂಡಿಯಾ ತಂಡಕ್ಕೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಅಜಿತ್ ಅಗರಕರ್ ಹೆಸರು ಕೇಳಿ ಬರುತ್ತಿದೆ. ಬಹುತೇಕ ಅವರೇ ಈ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆನೂ ಇದೆ.
PublicNext
24/02/2022 06:01 pm