ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಾಫ್ ಡು ಪ್ಲೆಸಿಸ್‌ಗೆ ಆರ್‌ಸಿಬಿ ನಾಯಕತ್ವ ಪಟ್ಟ?

ಬೆಂಗಳೂರು: ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆದರೆ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಈ ಮಧ್ಯೆ ಆರ್‌ಸಿಬಿ ನಾಯಕತ್ವ ಪಟ್ಟಕ್ಕೆ ಪ್ರಮುಖ ಆಟಗಾರರೊಬ್ಬರ ಹೆಸರು ಕೇಳಿ ಬರುತ್ತಿದೆ.

ಆರ್‌ಸಿಬಿಯ ನೂತನ ನಾಯಕನಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡು ಪ್ಲೆಸಿಸ್ ಆಯ್ಕೆ ಬಹುತೇಕ ಖಚಿತವಾಗಿದೆ. ಡ್ಯುಪ್ಲೆಕ್ಸ್ ಅವರನ್ನು ನಾಯಕನಾಗಿ ಒಂದೆರಡು ದಿನಗಳಲ್ಲಿ ಆರ್‌ಸಿಬಿ ಮಾಲೀಕತ್ವವು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಇತ್ತೀಚಿಗೆ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಪೈಪೋಟಿಗಿಳಿದು ಆರ್‌ಸಿಬಿ ಡೂಪ್ಲೆಸಿಸ್‍ರನ್ನ 7 ಕೋಟಿ ರೂ.ಗೆ ತನ್ನ ತಂಡಕ್ಕೆ ಸೇರ್ಪಡಿಸಿಕೊಂಡಿದೆ. ಕಳೆದ ಐಪಿಎಲ್-2021 ಆವೃತ್ತಿಯ ನಂತರ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಮುಂದಿನ ನಾಯಕರಾಗುತ್ತಾರೆ ಎಂದು ಎಲ್ಲರು ತಿಳಿದಿದ್ದರು. ಆದರೆ ಡಿವಿಲಿಯರ್ಸ್ ಕ್ರಿಕೆಟ್‌ನ ಎಲ್ಲಾ ಫಾರ್ಮೆಟ್‍ಗಳಿಂದ ನಿವೃತ್ತಿ ಘೋಷಿಸಿ ಎಲ್ಲರಿಗೂ ಆಘಾತ ನೀಡಿದ್ದರು.

Edited By : Vijay Kumar
PublicNext

PublicNext

17/02/2022 06:03 pm

Cinque Terre

47.09 K

Cinque Terre

0

ಸಂಬಂಧಿತ ಸುದ್ದಿ