ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 15 ನೇ ಆವೃತ್ತಿ ಆಟಗಾರರ ಮೆಗಾ ಹರಾಜು : 74 ಆಟಗಾರರಿಗೆ 388.10 ಕೋಟಿ ರೂ. ಖರ್ಚು

ಬೆಂಗಳೂರು : ನಗರದ ಖಾಸಗಿ ಹೊಟೇಲ್ ನಲ್ಲಿ TATA IPL 2022 ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಶನಿವಾರ ಮೊದಲ ದಿನದಂದು ಒಟ್ಟು 97 ಆಟಗಾರರನ್ನು ಬಿಡ್ ಮಾಡಲಾಗಿದ್ದು, ಇದರಲ್ಲಿ ಹತ್ತು ಐಪಿಎಲ್ ಫ್ರಾಂಚೈಸಿಗಳು ಬರೋಬ್ಬರಿ 388.10 ಕೋಟಿಗೆ 74 ಆಟಗಾರರನ್ನು ಖರೀದಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ಮೊದಲ ದಿನದ ನಂತರ ತಮ್ಮ ತಂಡದ ಬಲವನ್ನು ತಲಾ 13 ಆಟಗಾರರಿಗೆ ತೆಗೆದುಕೊಂಡರೆ, ಮುಂಬೈ ಇಂಡಿಯನ್ಸ್ (MI ) ತಮ್ಮ ತಂಡದ ಬಲವನ್ನು 8 ಆಟಗಾರರಿಗೆ ತೆಗೆದುಕೊಂಡಿದ್ದಾರೆ.

ಇಂದು ಎರಡನೇ ದಿನದ ಹರಾಜು ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

Edited By : Nirmala Aralikatti
PublicNext

PublicNext

13/02/2022 07:54 am

Cinque Terre

120.63 K

Cinque Terre

0

ಸಂಬಂಧಿತ ಸುದ್ದಿ