ಆಂಟಿಗುವಾ: ಐಸಿಸಿಯ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಅಂತಿಮ ಘಟ್ಟವನ್ನು ತಲುಪಿದೆ. ಯಶ್ ಧುಲ್ ನಾಯಕತ್ವದ ಭಾರತದ ಕಿರಿಯರ ತಂಡವು ಈ ಬಾರಿಯೂ ವಿಶ್ವಕಪ್‌ನ ಫೈನಲ್‌ಗೆ ಎಂಟ್ರಿ ಕೊಟ್ಟ ಸಾಧನೆ ಮಾಡಿದೆ. ಟೂರ್ನಿಯ ಭಾಗವಾಗಿ ನಾಳೆ (ಶನಿವಾರ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ಕಿರಿಯರ ಬಳಗವನ್ನು ಎದುರಿಸಲಿದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ಅಂಡರ್ 19 ತಂಡವು ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಈ ಸಾಧನೆಯನ್ನು ಉಳಿದ ಯಾವುದೇ ದೇಶದ ತಂಡವೂ ಮಾಡಿಲ್ಲ. ಇದೀಗ ಐದನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯುವ ಅದ್ಭುತ ಅವಕಾಶವನ್ನು ಭಾರತದ ಕಿರಿಯರು ಹೊಂದಿದ್ದಾರೆ.
PublicNext
04/02/2022 08:30 pm