ನವದೆಹಲಿ: ಮಾಜಿ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಲಕ್ನೋ ಫ್ರಾಂಚೈಸಿಯ ಮಾರ್ಗದರ್ಶಕರಾಗಿ ಇತ್ತೀಚೆಗೆ ಹೆಸರಿಸಲಾಗಿದೆ. ಲಕ್ನೋ ತಂಡದ ನಾಯಕತ್ವ ಜವಾಬ್ದಾರಿ ಕೆ.ಎಲ್.ರಾಹುಲ್‌ಗೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ವೈಟ್‌ವಾಶ್ ಮುಖಭಂಗ ಅನುಭವಿಸಿದಾಗ ಗಂಭೀರ್ ಅವರು ಕೆ.ಎಲ್.ರಾಹುಲ್ ನಾಯಕತ್ವದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ಅಂದು ಬೈದಿದ್ದ ಗೌತಮ್ ಗಂಭೀರ್ ಇಂದು ಕೆಎಲ್ ರಾಹುಲ್ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. ಈ ಸಂಬಂಧ ಮಾತಾಡಿದ ಗಂಭೀರ್, ರಾಹುಲ್ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ, ಬದಲಿಗೆ ಉತ್ತಮ ನಾಯಕ ಕೂಡ. ರಾಹುಲ್ ವಿಕೆಂಟ್ ಕೀಪಿಂಗ್ ಮಾಡುತ್ತಾರೆ, ಬ್ಯಾಟಿಂಗ್ ಕೂಡ ಅದ್ಭುತ. ನಾಯಕನಾಗಿ ಕೂಡ ಉತ್ತಮ ಆಟವಾಡಿದ್ದಾರೆ. ಮೂರು ವಿಚಾರದಲ್ಲೂ ತಾವೇನು ಎಂದು ಸಾಬೀತು ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಈ ಹಿಂದೆ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಅಗ್ರೆಸ್ಸಿವ್ನೆಸ್ ಇಲ್ಲ. ಇವರು ಆಕ್ರಮಣಕಾರಿ ಕ್ಯಾಪ್ಟನ್ಸಿ ಮಾಡುತ್ತಿಲ್ಲ ಎಂದು ಗಂಭೀರ್ ಆರೋಪಿಸಿದ್ದರು.
PublicNext
28/01/2022 07:54 am