ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 2nd ODI: ಪಂತ್, ಕೆಎಲ್ ಅರ್ಧಶತಕ, ಶಾರ್ದೂಲ್ ಹೋರಾಟ- ಹರಿಣರಿಗೆ 288 ರನ್‌ಗಳ ಗುರಿ

ಪಾರ್ಲ್: ರಿಷಭ್ ಪಂತ್ ಹಾಗೂ ನಾಯಕ ಕೆ.ಎಲ್.ರಾಹುಲ್ ಸಮಯೋಚಿತ ಅರ್ಧಶತಕ, ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾಗೆ 288 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.

ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾದ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಲು ಶಕ್ತವಾಯಿತು.

ಭಾರತದ ಪರ ರಿಷಭ್ ಪಂತ್ 85 ರನ್ (71 ಎಸೆತ), ಕೆ.ಎಲ್.ರಾಹುಲ್ 55 ರ‌ನ್ (79 ಎಸೆತ), ಶಾರ್ದೂಲ್ ಠಾಕೂರ್ ಅಜೇಯ 40 ರನ್, ಶಿಖರ್ ಧವನ್ 29 ರನ್, ಆರ್. ಅಶ್ವಿನ್ ಅಜೇಯ 25 ರನ್ ಗಳಿಸಿದರು.

ಇನ್ನು ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ 2 ವಿಕೆಟ್ ಪಡೆದರೆ, ಸಿಸಂದ ಮಗಲಾ, ಏಡನ್ ಮಕ್ರಾಮ್, ಕೇಶವ್ ಮಹಾರಾಜ್ ಹಾಗೂ ಆಂಡಿಲೆ ಫೆಹ್ಲುಕ್ವಾಯೊ ತಲಾ ಒಂದು ವಿಕೆಟ್ ಉರುಳಿಸಿದರು.

Edited By : Nagaraj Tulugeri
PublicNext

PublicNext

21/01/2022 06:02 pm

Cinque Terre

61.98 K

Cinque Terre

1

ಸಂಬಂಧಿತ ಸುದ್ದಿ