ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 3rd Test: ಮತ್ತೆ ವಿವಾದಕ್ಕೀಡಾದ ಡಿಆರ್‌ಎಸ್- ಕೊಹ್ಲಿ ಮಾತಿಗೆ ಕ್ರೀಡಾಪ್ರಿಯರ ಆಕ್ರೋಶ

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಸೋಲಿನ ಸುಳಿಯಲ್ಲಿ ಸಿಲುಕಿದೆ. ಪಂದ್ಯದ ಫಲಿತಾಂಶದ ಹೊರತಾಗಿ 3ನೇ ದಿನ ಆನ್​ ಫೀಲ್ಡ್​ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ನಡೆದುಕೊಂಡ ರೀತಿ ಹಾಟ್​ ಸುದ್ದಿಯಾಗುತ್ತಿದೆ. ಇದು ಎಷ್ಟು ಸರಿ, ತಪ್ಪಾ? ಎನ್ನುವ ಪ್ರಶ್ನೆ ಹುಟ್ಟಿಸಿದೆ.

ಸರಣಿ ವಿಜೇತರನ್ನು ನಿರ್ಣಯಿಸುವ ಈ ಪಂದ್ಯವು ಅತ್ಯಂತ ಕುತೂಹಲ ಘಟ್ಟಕ್ಕೆ ತಲುಪಿದೆ. ಈ ನಡುವೆ ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ನಿಖರತೆ ಕುರಿತು ಮಗದೊಮ್ಮೆ ಅನುಮಾನಗಳು ಮೂಡಿ ಬಂದಿವೆ. ಮೂರನೇ ದಿನದಾಟದ ಅಂತಿಮ ಅವಧಿಯಲ್ಲಿ ಈ ಘಟನೆ ನಡೆದಿತ್ತು. 212 ರನ್‌ಗಳ ಗುರಿ ಹಿಂಬಾಲಿಸುತ್ತಿದ್ದ ದಕ್ಷಿಣ ಆಫ್ರಿಕಾ ದಿಟ್ಟ ಉತ್ತರವನ್ನೇ ನೀಡುತ್ತಿತ್ತು.

ದ್ವಿತೀಯ ಪಂದ್ಯದ ಹೀರೋ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮಗದೊಮ್ಮೆ ಕ್ರೀಸಿನಲ್ಲಿ ಬಂಡೆಕಲ್ಲಿನಂತೆ ನಿಂತಿದ್ದರು. 3ನೇ ದಿನದಾಟದ ಸೌತ್​ ಆಫ್ರಿಕಾ 2ನೇ ಇನ್ನಿಂಗ್ಸ್​ನ 21ನೇ ಓವರ್​ನಲ್ಲಿ ನಡೆದ ಘಟನೆ ಚರ್ಚೆ ಹುಟ್ಟುಹಾಕಿದೆ. ಅಶ್ವಿನ್​ ಎಸೆದ 21ನೇ ಓವರ್​ನ 4 ಎಸೆತದಲ್ಲಿ ಆಫ್ರಿಕನ್​ ನಾಯಕ ಡೀನ್​ ಎಲ್ಗರ್​​ ಎಬಿ ಬಲೆಗೆ ಬೀಳುತ್ತಾರೆ. ಆನ್​ ಫೀಲ್ಡ್​ ಅಂಪೈಯರ್​​ ಮಾವ್ರೀಸ್​​ ಎರಾಸ್ಮಸ್​ ಔಟ್​ ಎಂದು ತೀರ್ಪನ್ನೂ ನೀಡುತ್ತಾರೆ. ಇದನ್ನ ಒಪ್ಪದ ಎಲ್ಗರ್​ ಡಿಆರ್​ಎಸ್​ ತೆಗೆದುಕೊಳ್ಳುತ್ತಾರೆ.

ಲೈನ್​ನಲ್ಲಿ ಬಿದ್ದ ಬಾಲ್​ ಓವರ್​ ದ ವಿಕೆಟ್​​ ಹಾದು ಹೋಗಿದ್ದು ಡಿಆರ್​​ಎಸ್​​ನಲ್ಲಿ ಕಂಡು ಬರುತ್ತೆ. ಹೀಗಾಗಿ 3ನೇ ಅಂಪೈರ್​​ ನಾಟ್​ ಔಟ್​ ಎಂದು ತೀರ್ಪು ನೀಡ್ತಾರೆ. ಎಲ್ಗರ್​​ ಮಂಡಿಯ ಕೆಳಗೆ ತಾಗಿದ ಚೆಂಡು ಅಷ್ಟು ಎತ್ತರಕ್ಕೆ ಹೋಗೋದ್ದನ್ನ ನೋಡಿ ಸ್ವತಃ ಆನ್​ಪೀಲ್ಡ್​ ಅಂಪೈರ್​​ ಎರಾಸ್ಮಸ್​ ಕೂಡ ಆಶ್ಚರ್ಯಗೊಳ್ಳುತ್ತಾರೆ. ಈ ತೀರ್ಪು ಇಡೀ ಟೀಂ​ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗುತ್ತೆ.

ಈ ವಿಚಾರದಲ್ಲಿ ಅಶ್ವಿನ್​ ಹಾಗೂ ಕೆಎಲ್​ ರಾಹುಲ್​ ತಮ್ಮದೇ ಶೈಲಿಯಲ್ಲಿ ಅಸಮಾಧಾನ ಹೊರ ಹಾಕಿದ್ರೆ, ನಾಯಕ ವಿರಾಟ್​ ಕೊಹ್ಲಿ ತುಸು ಹೆಚ್ಚೇ ಆಕ್ರೋಶಗೊಳ್ತಾರೆ. ಜೊತೆಗೆ ಸ್ಟಂಪ್​ ಮೈಕ್​ ಬಳಿ ಬಂದು ಸೂಪರ್​ ಸ್ಪೋರ್ಟ್ಸ್​​ ಪ್ರೊಡಕ್ಷನ್​ ಟೀಮ್​ ವಿರುದ್ಧ ಖಾರವಾದ ಮಾತುಗಳನ್ನಾಡ್ತಾರೆ. ನಮ್ಮ ತಂಡದ್ದು ಮಾತ್ರವಲ್ಲ ನಿಮ್ಮ ಬೌಲರ್​ಗಳೂ ಬಾಲ್​ ಶೈನ್​ ಮಾಡುವಾಗ ಅವರ ಮೇಲೂ ಪೋಕಸ್​ ಮಾಡಿ ಎಂದು ಹೇಳ್ತಾರೆ. ಕೊಹ್ಲಿಯ ಈ ವರ್ತನೆಯೇ ಇದೀಗ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

Edited By : Vijay Kumar
PublicNext

PublicNext

14/01/2022 03:30 pm

Cinque Terre

65.69 K

Cinque Terre

0