ಸಿಡ್ನಿ: ಇಂಗ್ಲೆಂಡ್ ತಂಡದ ಸ್ಪಿನ್ನರ್ ಜಾಕ್ ಲೀಚ್ ಅವರು ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವಾಗ ಅಭಿಮಾನಿಯೊಬ್ಬರ ಬೋಡು ತಲೆಗೆ ಆಟೋಗ್ರಾಫ್ ನೀಡಿದ್ದಾರೆ.
ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಾಕ್ ಲೀಚ್ ಅಭಿಮಾನಿಯೊಬ್ಬರ ಕೋರಿಕೆಯನ್ನು ಈಡೇರಿಸಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸ್ತಿದ್ದು, 46.5 ಓವರ್‌ಗಳಲ್ಲಿ 3 ವಿಕೆಟ್‌ಗೆ 126 ರನ್ ಗಳಿಸಿದೆ. ಆದರೆ ಮಳೆಯ ಕಾರಣ ಪಂದ್ಯ ಹೆಚ್ಚು ಹೊತ್ತು ನಡೆದಿಲ್ಲ. ಇನ್ನು ಜಾಕ್ ಲೀಚ್ ಈ ಪಂದ್ಯದಲ್ಲಿ ಎರಡು ಓವರ್ ಎಸೆದಿದ್ದು, ಮೂರು ರನ್ ನೀಡಿದ್ದಾರೆ.
PublicNext
05/01/2022 10:43 pm