ಪಾಕಿಸ್ತಾನದ ಕ್ರಿಕೆಟ್ ಆಟಗಾರ ಹಸನ್ ಅಲಿ ಪತ್ರಕರ್ತ ಅನಾಸ್ ಸಯೀದ್ ಮೇಲೆ ಸಿಟ್ಟಾಗಿದ್ದಾರೆ. ಪತ್ರಿಕಾಗೋಷ್ಠಿ ಅಂತಾನೂ ನೋಡದೇನೆ ಪತ್ರಕರ್ತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಮಿಸ್ಟರ್ ಹಸನ್.
ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಅನಾಸ್ ಸಯೀದ್ ಕೂಡ ಆಗಮಿಸಿದ್ದರು. ಹಸನ್ ಅಲಿ ಕಂಡ ಕೂಡಲೇ ಅನಾಸ್ ಸಯೀದ್ ಪ್ರಶ್ನೆಯನ್ನೂ ಕೇಳಲು ಶುರು ಮಾಡಿದ್ದಾರೆ. ಆದರೆ ಅನಾಸ್ ಗೆ ಹಸನ್ ಪ್ರಶ್ನೆ ಕೇಳಲು ಬಿಡಲೇ ಇಲ್ಲ.
ನೀವೂ ಪ್ರಶ್ನೆ ಕೇಳುವ ಮುಂಚೆ ಟ್ವಿಟರ್ ನಲ್ಲಿ ವೈಯಕ್ತಿಕವಾಗಿ ಬರೆಯೋದನ್ನ ಬಿಟ್ಟು ಬಿಡಿ ಅಂತಲೂ ಎಚ್ಚರಿಸಿದ್ದಾರೆ. ಆದರೆ ಏನ್ ಬರೆದಿದ್ದಾರೆ ಅಂತ ಹಸನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿಲ್ಲ ಅಷ್ಟೆ.
PublicNext
13/12/2021 02:59 pm