ಮುಂಬೈ: ನ್ಯೂಜಿಲೆಂಡ್ ಸ್ಪಿನರ್ ಅಜಾಜ್ ಪಟೇಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳನ್ನ ಕಬಳಿಸೋ ಮೂಲಕ ಇತಿಹಾಸ ಸೃಷ್ಟಿಸಿ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದ್ದಾರೆ.
ಭಾರತದ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 33 ವರ್ಷದ ಅಜಾಜ್ ಪಟೇಲ್,ಭಾರತ ತಂಡದ 10 ವಿಕೆಟ್ ಗಳನ್ನ ಉರುಳಿಸಿ ದಾಖಲೆ ಬರೆದಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕೂಡ ಬರೆದಿದ್ದಾರೆ. ಇಂಗ್ಲೆಂಡ್ ಜಿಮ್ ಲೇಕರ್ ಕೂಡ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದು ಇತಿಹಾಸ ಬರೆದಿದ್ದಾರೆ. ಈಗ ಅಜಾಜ್ ಪಟೇಲ್ ಮೂರನೇ ಸಾಧಕರಾಗಿದ್ದಾರೆ.
PublicNext
04/12/2021 01:54 pm