ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜಿಂಕ್ಯಾ ರಹಾನೆ ಕಳಪೆ ಪ್ರದರ್ಶನ-ಉಪನಾಯಕ ಪಟ್ಟ ಕೈಬಿಟ್ಟು ಹೋಗುತ್ತಾ ?

ಇಂಡಿಯನ್ ಕ್ರಿಕೆಟ್ ಪ್ಲೇಯರ್ ಹಾಗೂ ಟೆಸ್ಟ್ ಪಂದ್ಯದ ಉಪನಾಯಕ ಅಜಿಂಕ್ಯಾ ರಹಾನೆ ಕಳಪೆ ಆಟ ಪ್ರದೇಶನ ಭಾರಿ ಟೀಕೆಗೆ ಗುರಿ ಆಗುತ್ತಿದೆ.ಮುಂಬೈನ ಟೆಸ್ಟ್ ಪಂದ್ಯದಲ್ಲೂ ಗಾಯಗೊಂಡ ಕಾರಣ ಹೊರಗುಳಿದಿರೋ ಅಂಜಿಕ್ಯಾ ರಹಾನೆಯ ಆಟದ ಮೇಲೆ, ಬಿಸಿಸಿಐ ಕಣ್ಣು ಬಿದ್ದಿದೆ. ಹಾಗಾಗಿಯೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಕೈಬಿಡೋ ಸಾಧ್ಯತೆಗಳು ಈಗ ಹೆಚ್ಚು ಕೇಳಿ ಬರುತ್ತಿವೆ. ಆ ಜಾಗಕ್ಕೆ ಯಾರ್ ಬರ್ತಿದ್ದಾರೆ ಗೊತ್ತೇ ? ಬನ್ನಿ, ಹೇಳ್ತೀವಿ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಬೆಳಸಲಿದೆ. ಈ ಸರಣಿಗಾಗಿ ಭಾರತ ತಂಡವೂ ಇನ್ನಷ್ಟೆ ಪ್ರಕಟಗೊಳ್ಳಬೇಕಿದೆ. ಅದಕ್ಕೂ ಮೊದಲೇ ಇನ್ನೇನು ಕೆಲವೆ ದಿನಗಳಲ್ಲಿ ಬಿಸಿಸಿಐ ಒಂದು ಮಹತ್ವದ ಸಭೆ ಕರೆಯಲಿದೆ.

ಈ ಸಭೆಯಲ್ಲಿ ಆಫ್ರಿಕಾ ವಿರುದ್ಧದ ಈ ಟೆಸ್ಟ್ ಸರಣಿ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಬದಲು ರೋಹಿತ್ ಶರ್ಮಾ ಅವರನ್ನೇ ಉಪ ನಾಯಕನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಾಸಗಿ ಇಂಗ್ಲೀಷ್ ಪತ್ರಿಕೆಗೆ ಹೇಳಿವೆ.

Edited By :
PublicNext

PublicNext

04/12/2021 01:21 pm

Cinque Terre

39.03 K

Cinque Terre

0

ಸಂಬಂಧಿತ ಸುದ್ದಿ