ಚೆನ್ನೈ: ಎಂ. ಶಾರುಖ್ ಖಾನ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ತಮಿಳುನಾಡು ತಂಡವು ಕರ್ನಾಟಕದ ವಿರುದ್ಧ ರೋಚಕ ಗೆಲುವು ಸಾಧಿಸಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯನ್ನು ಮುಡಿಗೇರಿಸಿಕೊಂಡಿದೆ.
ತಮಿಳುನಾಡು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಟ್ವೀಟ್ ಮಾಡಿ ತನ್ನ ರಾಜ್ಯದ ತಂಡಕ್ಕೆ ಶುಭಾಯಶ ತಿಳಿಸಿದೆ. ಅಷ್ಟೇ ಅಲ್ಲದೆ ಎಂ.ಎಸ್. ಧೋನಿ ಅವರು ಕೊನೆಯ ಎಸೆತದಲ್ಲಿ ಎಂ. ಶಾರುಖ್ ಖಾನ್ ಸಿಕ್ಸರ್ ಸಿಡಿಸಿದ ದೃಶ್ಯವನ್ನು ಕುತೂಹಲದಿಂದ ಟಿವಿ ಮುಂದೆ ನಿಂತು ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದೆ.
ಈ ಟ್ವೀಟ್ ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ದೆಹಲಿಯ ಫಿರೋಜ್ ಷಾ ಕೋಟ್ಲಾ ಆವರಣದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಎಂ. ಶಾರುಖ್ ಖಾನ್ 15 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸ್ ಸೇರಿ 33 ರನ್ ಸಿಡಿಸಿದರು.
PublicNext
22/11/2021 09:21 pm