ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Syed Mushtaq Ali Trophy: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ- ಫೈನಲ್‌ಗೆ ಎಂಟ್ರಿ

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಸೆಮಿಫೈನಲ್‍ನಲ್ಲಿ ಮನೀಶ್ ಪಾಂಡೆ ಸಾರಥ್ಯದ ಕರ್ನಾಟಕ ತಂಡವು ವಿದರ್ಭ ವಿರುದ್ಧ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡವು 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ವಿದರ್ಭ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 172 ರನ್ ಗಳಿಸಲಷ್ಟೆ ಶಕ್ತವಾಗಿತ್ತು. ಈ ಮೂಲಕ 4 ರನ್‍ಗಳ ರೋಚಕ ಜಯದೊಂದಿಗೆ ಕರ್ನಾಟಕ ತಂಡ ಫೈನಲ್‍ಗೇರಿದೆ. 2ನೇ ಸೆಮಿಫೈನಲ್‍ನಲ್ಲಿ ತಮಿಳುನಾಡು ಹೈದರಾಬಾದ್‌ ತಂಡವನ್ನು ಸೋಲಿಸಿದೆ. ಸೋಮವಾರ ದೆಹಲಿಯಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

Edited By : Vijay Kumar
PublicNext

PublicNext

21/11/2021 07:21 am

Cinque Terre

56.72 K

Cinque Terre

0

ಸಂಬಂಧಿತ ಸುದ್ದಿ