ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗ ಸುಹಾಸ್, ಶಿಖರ್ ಧವನ್ ಸೇರಿ 35 ಮಂದಿಗೆ ಅರ್ಜುನ ಪ್ರಶಸ್ತಿ ಪ್ರದಾನ

ನವದೆಹಲಿ: ಕ್ರೀಡೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಇಂದು ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಿದರು.

ಒಟ್ಟು 35 ಮಂದಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಈ ಪ್ರಶಸ್ತಿ ಪಡೆದವರಲ್ಲಿ ಹೆಚ್ಚಿನವರು ಹಾಕಿ ಆಟಗಾರರಾಗಿದ್ದಾರೆ. ಭಾರತದ ಪುರುಷರ ಹಾಕಿ ತಂಡ ನಾಲ್ಕು ದಶಕಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದೆ. ಈ ಬಾರಿ ತಂಡ ಕಂಚಿನ ಪದಕದೊಂದಿಗೆ ಮರಳಿದೆ. ಅದೇ ಸಮಯದಲ್ಲಿ, ಮಹಿಳಾ ತಂಡವು ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದ ಸೆಮಿಫೈನಲ್ ಪ್ರವೇಶಿಸಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದರು.

ಅರ್ಜುನ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳು:

ಅರ್ಪಿಂದರ್ ಸಿಂಗ್, ಸಿಮ್ರಂಜಿತ್ ಕೌರ್, ಶಿಖರ್ ಧವನ್, ಭವಾನಿ ದೇವಿ, ಮೋನಿಕಾ, ವಂದನಾ ಕಟಾರಿಯಾ, ಸಂದೀಪ್ ನರ್ವಾಲ್, ಹಿಮಾನಿ ಉತ್ತಮ್ ಪರಬ್, ಅಭಿಷೇಕ್ ವರ್ಮಾ, ಅಂಕಿತಾ ರೈನಾ, ದೀಪಕ್ ಪುನಿಯಾ, ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣ್ ಕುಮಾರ್, ಸಿಮ್ರಂಜೀತ್ ಸಿಂಗ್, ಯೋಗೇಶ್ ಕಥುನಿಯಾ, ನಿಶಾದ್ ಕುಮಾರ್, ಪ್ರವೀಣ್ ಕುಮಾರ್, ಕನ್ನಡಿಗ ಸುಹಾಶ್ ಯತಿರಾಜ್, ಸಿಂಗ್ರಾಜ್ ಅಧಾನ, ಭಾವಿನಾ ಪಟೇಲ್, ಹರ್ವಿಂದರ್ ಸಿಂಗ್, ಮತ್ತು ಶರದ್ ಕುಮಾರ್.

ದ್ರೋಣಾಚಾರ್ಯ ಪ್ರಶಸ್ತಿ:

ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ ಅವರಿಗೆ ಸಂದಿದೆ. ನಿಯಮಿತ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ, ಸಂಧ್ಯಾ ಗುರುಂಗ್, ಪ್ರೀತಮ್ ಸಿವಾಚ್, ಜೈ ಪ್ರಕಾಶ್ ನೌಟಿಯಾಲ್ ಮತ್ತು ಸುಬ್ರಮಣಿಯನ್ ರಾಮನ್ ಅವರಿಗೆ ನೀಡಲಾಯಿತು.

ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ಲೇಖಾ ಕೆಸಿ, ಅಭಿಜೀತ್ ಕುಂಟೆ, ದವೀಂದರ್ ಸಿಂಗ್ ಗಾರ್ಚಾ, ವಿಕಾಸ್ ಕುಮಾರ್ ಮತ್ತು ಸಜ್ಜನ್ ಸಿಂಗ್ ಪಡೆದರು.

Edited By : Vijay Kumar
PublicNext

PublicNext

13/11/2021 08:25 pm

Cinque Terre

31.51 K

Cinque Terre

0

ಸಂಬಂಧಿತ ಸುದ್ದಿ