ಇಸ್ಲಾಮಾಬಾದ್: ಈಗಾಗಲೇ ಟಿ20 ಕ್ರಿಕೆಟ್ ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ಮುಂಬರುವ ದಿನಗಳಲ್ಲಿ ಏಕದಿನ ಕ್ರಿಕೆಟ್ ನಾಯಕತ್ವಕ್ಕೂ ವಿದಾಯ ಘೋಷಣೆ ಮಾಡಲಿದ್ದಾರೆಂಬ ಮಾತು ಕೇಳಿ ಬರುತ್ತಿವೆ. ಇದೇ ವಿಚಾರವಾಗಿ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಆಫ್ರಿದಿ ಮಾತನಾಡಿದ್ದಾರೆ.
ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಫ್ರಿದಿ, "ವಿರಾಟ್ ಕೊಹ್ಲಿ ಓರ್ವ ಅಗ್ರ ಬ್ಯಾಟರ್ ಆಗಿದ್ದು, ನಾಯಕತ್ವದಿಂದ ಕೆಳಗಿಳಿದು, ಯಾವುದೇ ರೀತಿಯ ಒತ್ತಡವಿಲ್ಲದೇ ಮುಕ್ತವಾಗಿ ಕ್ರಿಕೆಟ್ ಆಡಬೇಕು. ಟೀಂ ಇಂಡಿಯಾಗೆ ವಿರಾಟ್ ಓರ್ವ ಅದ್ಭುತ ಶಕ್ತಿಯಾಗಿದ್ದಾರೆ. ಅವರು ಮೂರು ಮಾದರಿ ಕ್ರಿಕೆಟ್ ನಾಯಕತ್ವ ತ್ಯಜಿಸಿದರೆ ಖಂಡಿತವಾಗಿ ಬ್ಯಾಟಿಂಗ್ನಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
13/11/2021 07:28 pm