ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC: ಪಾಕ್ ಕಪ್ ಕನಸು ಭಗ್ನ- ಫೈನಲ್ ಪ್ರವೇಶಿಸಿದ ಆಸೀಸ್ ಪಡೆ

ದುಬೈ: ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನದೊಂದಿಗೆ ಸತತ ಗೆಲುವು ಸಾಧಿಸುತ್ತಾ ಮುನ್ನುಗ್ಗಿದ್ದ ಪಾಕಿಸ್ತಾನ ಅದೇ ಆತ್ಮ ವಿಶ್ವಾಸದೊಂದಿಗೆ ಸೆಮಿಫೈನಲ್‌ಗೇರಿತ್ತು. ಆದರೆ ಪಾಕಿಸ್ತಾನದ ಗೆಲುವಿನ ಓಟಕ್ಕೆ ಆಸ್ಟ್ರೇಲಿಯಾ ತಡೆ ಹಾಕಿದೆ.

ಸಾಕಷ್ಟು ರೋಚಕವಾಗಿ ನಡೆದ ಇಂದಿನ ಪಂದ್ಯದಲ್ಲಿ ಅಂತಿಮವಾಗಿ ಗೆಲುವಿನ ನಗು ಆಸ್ಟ್ರೇಲಿಯಾ ತಂಡದ ಪಾಲಾಗಿದೆ. ಮ್ಯಾಥ್ಯೂ ವೇಡ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಡೇವಿಡ್ ವಾರ್ನರ್ ಈ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಆಡಂ ಜಂಪಾ ಪ್ರದರ್ಶನ ಕೂಡ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು ಮರೆಯುವಂತಿಲ್ಲ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಪಾಕ್ ಮೊಹಮ್ಮದ್ ರಿಜ್ವಾನ್ (67 ರನ್), ಫಖರ್ ಜಮಾನ್ (55. ರನ್) ಹಾಗೂ ನಾಯಕ ಬಾಬರ್ ಆಜಮ್ (39 ರನ್) ಸಹಾಯದಿಂದ 4 ವಿಜೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.

ಬಳಿಕ 177 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್ ಪಡೆ 6 ಎಸೆತಗಳು ಬಾಕಿ ಇರುವಂತೆ 5 ನಷ್ಟಕ್ಕೆ 177 ರನ್ ಸಿಡಿಸಿ ಗೆಲುವಿನ ನಗೆ ಬೀರಿತು‌. ಇದರೊಂದಿಗೆ ಫೈನಲ್ ಪ್ರವೇಶ ಮಾಡಿದೆ.

ಆಸೀಸ್ ಪರ ಡೇವಿಡ್ ವಾರ್ನರ್ 49 ರನ್, ಮ್ಯಾಥ್ಯೂ ವೇಡ್ 41 ರನ್ (17 ಎಸೆತ) ಹಾಗೂ ಮಾರ್ಕಸ್ ಸ್ಟೋಯ್ನಿಸ್ 40 ರನ್ ಚೆಚ್ವಿದರು‌.

Edited By : Vijay Kumar
PublicNext

PublicNext

12/11/2021 12:31 am

Cinque Terre

43.64 K

Cinque Terre

9