ದುಬೈ: 2021ರ ಟಿ20 ವಿಶ್ವಕಪ್ ಟೂರ್ನಿಯ ಕೊನೆಯ ಪಂದ್ಯವು ಇಂದು ನಮೀಬಿಯಾ ಹಾಗೂ ಭಾರತ ನಡುವೆ ನಡೆಯುತ್ತಿದೆ. ಈ ಮಧ್ಯೆ ಭಾರತ ತಂಡದ ಎಲ್ಲಾ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕೆ ತಿಳಿದಿರುವುದು ಕಂಡುಬಂದಿದೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ (71) ಅವರು ಶನಿವಾರ ನಿಧನ ಹೊಂದಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇಂದು ಟೀಂ ಇಂಡಿಯಾ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಮೈದಾನಕ್ಕೆ ಇಳಿದಿದ್ದಾರೆ.
ಮನೋಜ್ ಪ್ರಭಾಕರ್, ಆಶಿಶ್ ನೆಹ್ರಾ, ಶಿಖರ್ ಧವನ್, ರಿಷಭ್ ಪಂತ್, ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ರುಮೇಲಿ ಧಾರ್ ಸೇರಿದಂತೆ ಅನೇಕ ಆಟಗಾರರ ಬೆಳವಣಿಗೆಯಲ್ಲಿ ತಾರಕ್ ಸಿನ್ಹಾ ಅವರು ಪ್ರಮುಖ ಪಾತ್ರ ವಹಿಸಿದ್ದರು.
PublicNext
08/11/2021 09:17 pm