ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | IND vs SCO: ಜಡೇಜಾ, ಶಮಿ ಬೌಲಿಂಗ್ ದಾಳಿಗೆ ಸ್ಕಾಟ್ಲೆಂಡ್ ಸರ್ವಪತನ; ಟೀಂ ಇಂಡಿಯಾಗೆ 86 ರನ್‌ಗಳ ಗುರಿ

ದುಬೈ: ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ನಲುಗಿ, ಸರ್ವಪತನ ಕಂಡ ಸ್ಕಾಟ್ಲೆಂಡ್ ತಂಡವು ಟೀಂ ಇಂಡಿಯಾಗೆ ಕೇವಲ 86 ರನ್‌ಗಳ ಗುರಿ ನೀಡಿದೆ.

ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 17.4 ಓವರ್‌ಗಳಲ್ಲಿ ತನ್ನ ಎಲ್ಲ 10 ವಿಕೆಟ್ ಕಳೆದುಕೊಂಡು 85 ರನ್‌ ಗಳಿಸಿದೆ.

ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ 24 ರನ್, ಮೈಕೆಲ್ ಲೀಸ್ಕ್ 21 ರನ್ ಗಳಿಸಿದರು. ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿ ದಾಟಲು ವಿಫಲರಾದರು. ಇನ್ನು ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಹಾಗೂ ಆರ್‌. ಅಶ್ವಿನ್ 1 ವಿಕೆಟ್ ಉರುಳಿಸಿದರು.

Edited By : Vijay Kumar
PublicNext

PublicNext

05/11/2021 09:08 pm

Cinque Terre

40.44 K

Cinque Terre

4