ಅಬುಧಾಬಿ: ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಇಂದು ಅಫ್ಘಾನಿಸ್ತಾನದ ವಿರುದ್ಧ ಗೆಲುವಿನ ಖಾತೆ ತೆರೆಯುತ್ತಾ ಎಂಬ ಕುತೂಹಲ ಮೂಡಿದೆ.
ಅಬುಧಾಬಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಅಫ್ಘಾನ್ ನಡುವಿನ ಪಂದ್ಯವು ಇಂದು ರಾತ್ರಿ 7:30 ಗಂಟೆಗೆ ನಡೆಯಲಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಪಡೆಗೆ ಅಫ್ಘಾನಿಸ್ತಾನದ ಮಹಮ್ಮದ್ ನಬಿ, ರಶೀದ್ ಖಾನ್ ಹಾಗೂ ಮುಜೀಬ್ ಉರ್ ರಹಮಾನ್ ಆಘಾತ ನೀಡುವ ಸಾಧ್ಯತೆ ಇದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ 3 ಪಂದ್ಯಗಳನ್ನು ಆಡಿರುವ ಅಫ್ಘಾನಿಸ್ತಾನವು 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಭಾರತ ಆಡಿರುವ ಎರಡೂ ಪಂದ್ಯಗಲ್ಲಿಯೂ ಸೋಲು ಕಂಡಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲೂ ಸೋಲು ಕಂಡರೆ ಟೂರ್ನಿಯಿಂದ ಹೊರಬೀಳುವುದು ನಿಶ್ಚಿತವಾಗಿದೆ.
PublicNext
03/11/2021 01:31 pm