ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC | PAK vs NMB: ಡೇವಿಡ್ ವೈಸ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ: ಪಾಕ್ ಗೆ ಸತತ ನಾಲ್ಕನೇ ಗೆಲುವು

ಅಬುಧಾಬಿ: ಮೊಹಮ್ಮದ್ ರಿಜ್ವಾನ್, ನಾಯಕ ಬಾಬರ್ ಆಜಮ್ ಅದ್ಭುತ ಜೊತೆಯಾಟ‌ ಹಾಗೂ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ ತಂಡವು ನಮೀಬಿಯಾ ವಿರುದ್ಧ 46 ರನ್‌ಗಳಿಂದ ಗೆದ್ದು ಬೀಗಿದೆ.

ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ನಡೆದ 31ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟಿಂಗ್ 190 ರನ್‌ಗಳ ಗುರಿ ನೀಡಿತ್ತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ನಮೀಬಿಯಾ ತಂಡವು 5 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲು ಶಕ್ತವಾಯಿತು. ಈ ಮೂಲಕ ಪಾಕಿಸ್ತಾನವು ಸತತ ನಾಲ್ಕನೇ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.

ನಮೀಬಿಯಾ ಪರ ಕ್ರೇಗ್ ವಿಲಿಯಮ್ಸ್ 40 ರನ್, ಸ್ಟೀಫನ್ ಬಾರ್ಡ್ 29 ರನ್, ಡೇವಿಡ್ ವೈಸ್ 43 ರನ್ ಗಳಿಸಿದರು. ಇನ್ನು ಪಾಕ್ ಪರ ಹಸನ್ ಅಲಿ,ಇಮಾದ್ ವಾಸೀಮ್, ಶಾಬಾದ್ ಖಾನ್, ಹ್ಯಾರಿಸ್ ರೌಫ್‌ ತಲಾ‌ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ ಅಜೇಯ (77 ರ‌ನ್), ಬಾಬರ್ ಆಜಮ್ (70 ರನ್) ಹಾಗೂ ಮೊಹಮ್ಮದ್ ಹಫೀಜ್ ಅಜೇಯ (32 ರನ್) ಸಹಾಯದಿಂದ 189 ರನ್ ದಾಖಲಿಸಿತ್ತು.

Edited By : Nirmala Aralikatti
PublicNext

PublicNext

02/11/2021 11:20 pm

Cinque Terre

89.59 K

Cinque Terre

3