ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಯಾನ್ಸ್​​ಗೆ 'ಕಮ್​ಬ್ಯಾಕ್' ಸಿಹಿ ಸುದ್ದಿ ಕೊಟ್ಟ ಯುವಿ

ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರು ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಯುವಿ, "ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಜನರ ಬೇಡಿಕೆಯ ಮೇರೆಗೆ ನಾನು ಫೆಬ್ರುವರಿಯಲ್ಲಿ ಮತ್ತೆ ಪಿಚ್‌ಗೆ ಮರಳಲಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಕೋರಿಕೆಗೆ ಧನ್ಯವಾದಗಳು. ಭಾರತವನ್ನು ಬೆಂಬಲಿಸುತ್ತಿರಿ. ಇದು ನಮ್ಮ ತಂಡ. ನಿಜವಾದ ಅಭಿಮಾನಿಗಳು ಕಠಿಣ ಸಮಯದಲ್ಲೂ ಬೆಂಬಲವಾಗಿರುತ್ತಾರೆ" ಎಂದು ತಿಳಿಸಿದ್ದಾರೆ.

2011ರ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಪಂದ್ಯಾವಳಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಚಿಕಿತ್ಸೆಗೊಳಗಾಗಿ 2012ರಲ್ಲಿ ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಮರಳಿದರು. ಆದರೆ ಅವರು ಹಿಂದಿನ ಜಾದೂತನವನ್ನು ಕಳೆದುಕೊಂಡಿದ್ದರು.

ಯುವರಾಜ್ ಅವರು 2019ರ ಜೂನ್ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದರು. ಬಳಿಕ ಕೆನಡಾದಲ್ಲಿ ಗ್ಲೋಬಲ್ ಟಿ20 ಟೂರ್ನಿ, ದುಬೈನಲ್ಲಿ ಟಿ10 ಲೀಗ್​ನಲ್ಲಿ ಆಡಿದ್ದರು. ಐಪಿಎಲ್​ನಲ್ಲಿ (IPL) ಯುವಿ ಕಿಂಗ್ಸ್​ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಆರ್​ಸಿಬಿ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರವಾಗಿ ಆಡಿದ್ದರು.

Edited By : Vijay Kumar
PublicNext

PublicNext

02/11/2021 01:31 pm

Cinque Terre

48.05 K

Cinque Terre

3

ಸಂಬಂಧಿತ ಸುದ್ದಿ