ದುಬೈ: ಕ್ರಿಕೆಟ್ ಪ್ರೇಮಿಗಳಲ್ಲಿ 'ಟೀಂ ಇಂಡಿಯಾ VS ಪಾಕಿಸ್ತಾನ್' ಜ್ವರ ಶುರುವಾಗಿದೆ. ಭಾರತೀಯ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು, ಟೀಂ ಇಂಡಿಯಾಗೆ ಶುಭ ಹಾರೈಸುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಆಟಗಾರರು ಇಂದು ಬೆಳಿಗ್ಗೆ ದುಬೈನ ಐಸಿಸಿ ಅಕಾಡೆಮಿಯ ಸ್ಟೇಡಿಯಂಗೆ ಅಭ್ಯಾಸಕ್ಕಾಗಿ ಒಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಇಂದು ಆರನೇ ಬಾರಿಗೆ ಮುಖಾಮುಖಿಯಾಗಲಿವೆ. ಭಾರತವು ಟಿ20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಬೌಲ್-ಔಟ್ ಸೇರಿದಂತೆ ಎಲ್ಲ ಐದು ಪಂದ್ಯಗಳನ್ನು ಗೆದ್ದಿದೆ.
PublicNext
24/10/2021 10:21 am