ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 ವಿಶ್ವಕಪ್: ಪಾಕ್‌ ವಿರುದ್ಧದ ಪಂದ್ಯದಲ್ಲಿ 'ಭುವಿ'ಯನ್ನ ಹೊರಗಿಡುವುದು ಸೂಕ್ತ; ಆಕಾಶ್ ಚೋಪ್ರ

ದುಬೈ: ಟಿ20 ವಿಶ್ವಕಪ್‌ ಭಾಗವಾಗಿ ಅಕ್ಟೋಬರ್ 24ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲಿನ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಬದ್ಧ ಎದುರಾಳಿಗಳ ನಡುವಿನ ಈ ಕದನದಲ್ಲಿ ಗೆಲ್ಲುವವರು ಯಾರು ಎಂಬುದು ಎಲ್ಲರಲ್ಲಿರುವ ಕುತೂಹಲಕವಾಗಿದೆ. ಈ ಪಂದ್ಯದಲ್ಲಿ ಭಾರತದ ಆಡುವ ಇಲೆವೆನ್ ಬಳಗದಿಂದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಹೊರಗಿಡಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಐಪಿಎಲ್‌ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಪರವಾಗಿ ಮಿಂಚುವಲ್ಲಿ ವಿಫಲವಾಗಿದ್ದ ಭುವಿ ಟೀಂ ಇಂಡಿಯಾ ಪರವಾಗಿಯೂ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ನಾಲ್ಕು ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ 54 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದಾರೆ. ಅಲ್ಲದೆ ಒಂದೇ ಒಂದು ವಿಕೆಟ್ ಪಡೆಯಲು ಕೂಡ ಭುವಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಸೂಕ್ತ ಎಂದು ಆಕಾಶ್ ಚೋಪ್ರ ತಿಳಿಸಿದ್ದಾರೆ.

"ಭುವನೇಶ್ವರ್ ಕುಮಾರ್ ತುಂಬಾ ದುಬಾರಿಯಾಗಿದ್ದಾರೆ. ಅವರು ತಮ್ಮ ಸಾಮಾನ್ಯ ಲಯದಲ್ಲಿದ್ದಂತೆ ಕಂಡು ಬರುತ್ತಿಲ್ಲ. ಅವರು ತುಂಬಾ ಅನುಭವಿ ಆಟಗಾರ ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಸೂಕ್ತ ಎಂದು ನನಗೆ ಅನಿಸುತ್ತಿಲ್ಲ. ನನ್ನ ಪ್ರಕಾರ ಶಾರ್ದೂಲ್ ಠಾಕೂರ್ ಆವರನ್ನು ಆಡಿಸುವುದು ಉತ್ತಮ" ಎಂದು ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

19/10/2021 04:19 pm

Cinque Terre

22.37 K

Cinque Terre

0

ಸಂಬಂಧಿತ ಸುದ್ದಿ