ನವದೆಹಲಿ: ಕೊರೊನಾದಿಂದ ಅರ್ಧಕ್ಕೆ ನಿಂತ 14ನೇ ಅವೃತ್ತಿಯ ಐಪಿಎಲ್ ಆಟಕ್ಕೆ ನಾಳೆ ತೆರೆ ಬಿಳಲಿದೆ.ನಾಳೆ ಅಕ್ಟೋಬರ್ 15 ರ ಶುಕ್ರವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದ್ದು ಥ್ರಿಲ್ಲಿಂಗ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕಾದು ಕುಳಿತಿದ್ದಾರೆ.
ಇನ್ನು ಐಪಿಎಲ್ ಇತಿಹಾಸದಲ್ಲೇ ಸಿಎಸ್ ಕೆ ಮೂರು ಟ್ರೋಫಿ ಗೆದ್ದಿದೆ. 9 ಬಾರಿ ಪ್ಲೇ ಆಫ್ ಸುತ್ತಿಗೇರಿದ್ದು, 8 ಬಾರಿ ಫೈನಲ್ ಪ್ರವೇಶಿಸಿದೆ. ಕೋಲ್ಕತ ಕೇವಲ ಒಂದು ಬಾರಿ ಮಾತ್ರ ಐಪಿಎಲ್ ಟ್ರೋಫಿ ಎತ್ತಿಹಿಡಿದಿದೆ ಮತ್ತು 6 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಅಭಿಮಾನಿಗಳಲ್ಲಿ ಈಗಾಗಲೇ ಚರ್ಚೆಯಾಗುತ್ತಿರುವಂತೆ ನಾಳಿನ ಫೈನಲ್ ಪಂದ್ಯದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ? ಎಂಬ ಪ್ರಶ್ನೆ ಮೂಡಿದೆ.
ನಾಳೆ ಐಪಿಎಲ್ ಸೀಸನ್ 14ರ ಟ್ರೋಫಿಗಾಗಿ ಸಿಎಸ್ ಕೆ ಮತ್ತು ಕೆಕೆಆರ್ ಮೈದಾನಕ್ಕಿಳಿದು ಕಾದಾಡಲಿದ್ದು, ಟ್ರೋಫಿ ಯಾರ ಪಾಲಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
PublicNext
14/10/2021 10:25 pm