ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021: ಕೆಕೆಆರ್‌ಗೆ ರೋಚಕ ಗೆಲುವು- ನನಸಾಗದ ಆರ್‌ಸಿಬಿ 'ಚೊಚ್ಚಲ ಟ್ರೋಫಿ' ಕನಸು

ಶಾರ್ಜಾ: ಸುನಿಲ್ ನರೈನ್ ಅದ್ಭುತ ಆಲ್‌ರೌಂಟರ್ ಪ್ರದರ್ಶನದಿಂದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಲು ಶಕ್ತವಾಗಿತ್ತು. 139 ರನ್‌ಗಳ ಸಾಧಾರಣ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ 2 ಎಸೆತಗಳು ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 139 ರನ್‌ ಗಳಿಸಿ ಜಯ ಗಳಿಸಿದೆ. ಇದರೊಂದಿದೆ ಕ್ವಾಲಿಫೈಯರ್ ಎರಡನೇ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಇನ್ನು ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.

ಕೆಕೆಆರ್ ಪರ ಶುಭ್ಮನ್ ಗಿಲ್ 29 ರನ್, ವೆಂಕಟೇಶ್ ಅಯ್ಯರ್ ಹಾಗೂ ಸುನಿಲ್ ನರೈನ್ ತಲಾ 26 ರನ್‌, ನಿತೀಶ್ ರಾಣಾ 23 ರನ್‌ ಗಳಿಸಿದರು. ಇನ್ನು ಆರ್‌ಸಿಬಿ ಪರ ಹರ್ಷಲ್ ಪಟೇಲ್, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ (39 ರನ್) ಹಾಗೂ ದೇವದತ್ ಪಡಿಕ್ಕಲ್ (21 ರನ್‌) ಹೊರತುಪಡಿಸಿ ಯಾವುದೇ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಮಹತ್ವದ ಪಂದ್ಯದಲ್ಲೇ ಗ್ಲೇನ್ ಮ್ಯಾಕ್ಸ್‌ವೆಲ್ (11 ರನ್), ಶ್ರೀಕರ್ ಭರತ್ (9 ರನ್) ಹಾಗೂ ಎಬಿ ಡಿವಿಲಿಯರ್ಸ್ (11 ರನ್) ಬಹುಬೇಗ ವಿಕೆಟ್‌ ಕೈಚೆಲ್ಲಿದರು.

ಇನ್ನು ಕೆಕೆಆರ್ ಪರ ಸುನಿಲ್ ನರೈನ್ ಪ್ರಮುಖ 4 ವಿಕೆಟ್‌ ಕಿತ್ತು ಮಿಂಚಿದ್ದರು. ಲಾಕಿ ಫರ್ಗ್ಯುಸನ್ 2 ವಿಕೆಟ್ ಉರುಳಿಸಿದ್ದರೆ, ವರುಣ್ ಚಕ್ರವರ್ತಿ ರನ್‌ ಏರಿಕೆ ನಿಯಂತ್ರಿಸಿದ್ದರು. ಅವರು 4 ಓವರ್‌ ಬೌಲಿಂಗ್ ಮಾಡಿ ಕೇವಲ 20 ರನ್‌ ಬಿಟ್ಟುಕೊಟ್ಟಿದ್ದರು.

Edited By : Vijay Kumar
PublicNext

PublicNext

11/10/2021 11:07 pm

Cinque Terre

63.76 K

Cinque Terre

31

ಸಂಬಂಧಿತ ಸುದ್ದಿ