ದುಬೈ: ಇತ್ತೀಚೆಗೆ ಶಾರ್ಜಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್- ಕೋಲ್ಕತ ನೈಟ್ ರೈಡರ್ಸ್ ನಡುವೆ ರೋಚಕ ಪಂದ್ಯ ನಡೆದು ಅಲ್ಲಿ ಕೋಲ್ಕತ ಪಂದ್ಯ ಗೆದ್ದಿತ್ತು. ಈ ವೇಳೆ ಒಂದು ಚಕಮಕಿ ನಡೆದಿದೆ, ಪಂದ್ಯ ನಡೆದು ಕೆಲವು ದಿನಗಳಾದರೂ ಈ ಬಗ್ಗೆ ಚರ್ಚೆಗಳು ಮಾತ್ರ ನಿಂತಿಲ್ಲ.
ಡೆಲ್ಲಿ ಆಟಗಾರ ಆರ್.ಅಶ್ವಿನ್ ಹಾಗೂ ಕೋಲ್ಕತ ನಾಯಕ ಇಯಾನ್ ಮಾರ್ಗನ್, ಟಿಮ್ ಸೌಥಿ ನಡುವೆ ಈ ವಾಗ್ವಾದ ನಡೆದಿತ್ತು.
ಡೆಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ 19ನೇ ಓವರ್ ಕೊನೆಯ ಎಸೆತದಲ್ಲಿ ಕ್ಷೇತ್ರ ರಕ್ಷಕ ಎಸೆದ ಚೆಂಡು ರಿಷಭ್ ಪಂತ್ ಭುಜಕ್ಕೆ ಬಡಿದು ದೂರ ಹೋಯಿತು. ಆಗ ಮತ್ತೂಂದು ತುದಿಯಲ್ಲಿದ್ದ ಅಶ್ವಿನ್ ಓವರ್ ಥ್ರೋ ಲೆಕ್ಕಾಚಾರದಲ್ಲಿ ರನ್ ಗೆ ಓಡಿದರು. ಈ ವೇಳೆ ಟಿಮ್ ಸೌಥಿ ಅಶ್ವಿನ್‌ರನ್ನು ತಡೆದರು. ಕೂಡಲೇ ನಾಯಕ ಮಾರ್ಗನ್ ಕೂಡಾ ವಾಗ್ವಾದಕ್ಕೆ ಮುಂದಾದರು. ಅದನ್ನು ಅಶ್ವಿನ್ ಪ್ರತಿಭಟಿಸಿದರು. ಆಗ ಕೀಪರ್ ದಿನೇಶ್ ಕಾರ್ತಿಕ್ ಮಧ್ಯೆ ಬಂದು ಜಗಳ ನಿಲ್ಲಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ್ದ ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ ಚೆಂಡನ್ನು ಎಸೆದಾಗ ಅದು ರಿಷಭ್ ಪಂತ್ ಗೆ ತಗುಲಿತು. ನಂತರ ಅಶ್ವಿನ್ ರನ್ ಓಡಲಾರಂಭಿಸಿದರು. ಆದರೆ ಮಾರ್ಗನ್ ಇದನ್ನು ಮೆಚ್ಚುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಚೆಂಡು ಬ್ಯಾಟ್ಸ್‌ಮನ್ ಅಥವಾ ಪ್ಯಾಡ್‌ಗೆ ಬಡಿದಾಗ, ಅವರು ಕ್ರಿಕೆಟ್ ನ ಸ್ಪಿರಿಟ್ ನಲ್ಲಿ ರನ್ ಓಡುವುದಿಲ್ಲ ಎಂದು ನಿರೀಕ್ಷಿಸಿದ್ದರು. ಆದರೆ ಘಟನೆಯ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯವಿದೆ ಎಂದಿದ್ದರು.
ಈ ವಿಚಾರದ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಕೂಡಾ ಮಾತನಾಡಿದ್ದು, ಸೆಹವಾಗ್ “ನಾನು ದಿನೇಶ್ ಕಾರ್ತಿಕ್ ರನ್ನು ಈ ಎಲ್ಲದರಲ್ಲೂ ದೊಡ್ಡ ತಪ್ಪಿತಸ್ಥ ಎಂದು ಪರಿಗಣಿಸುತ್ತೇನೆ. ಮಾರ್ಗನ್ ಹೇಳಿದ್ದನ್ನು ಅವರು ಮಾತನಾಡದೇ ಇದ್ದಿದ್ದರೆ, ಅಂತಹ ಗಲಾಟೆ ಇರುತ್ತಿರಲಿಲ್ಲ. ಇದು ಹೆಚ್ಚೇನೂ ಅಲ್ಲ, ಕೇವಲ ವಾದ , ಇದು ಆಟದಲ್ಲಿ ನಡೆಯುತ್ತದೆ, ಮುಂದುವರಿಯಿರಿ ಎಂದು ದಿನೇಶ್ ಕಾರ್ತಿಕ್ ಹೇಳಿದ್ದರೆ ಸಾಕಿತ್ತು. ಇದನ್ನು ಯಾರು ಹೇಗೆ ಯೋಚಿಸುತ್ತಾರೆ ಎಂದು ವಿವರಣೆಯ ಅಗತ್ಯವೇನು? ಎಂದು ಕಾರ್ತಿಕ್ ಅವರ ಮಾರ್ಗನ್ ಪರ ನಿಲುವಿಗೆ ಸೆಹವಾಗ್ ಆಕ್ಷೇಪ ವ್ಯಕ್ತಪಡಿಸಿದ್ದಾ
PublicNext
02/10/2021 05:21 pm