ನವದೆಹಲಿ: ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರ ರೂಪೀಂದರ್ ಪಾಲ್ ಸಿಂಗ್ ಇಂದು (ಸೆಪ್ಟೆಂಬರ್ 30) ನಿವೃತ್ತಿ ಘೋಷಿಸಿದ್ದಾರೆ.
30ರ ಹರೆಯದ ರೂಪೀಂದರ್ ಅವರು ಭಾರತದ ಪರ 223 ಪಂದ್ಯಗಳನ್ನು ಆಡಿದ್ದಾರೆ. ಕಳೆದ ತಿಂಗಳು ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಹಾಕಿ ಪುರುಷರ ತಂಡದಲ್ಲಿ ರೂಪೀಂದರ್ ಪಾಲ್ ಸಿಂಗ್ ಕೂಡ ಇದ್ದರು.
ನಿವೃತ್ತಿ ವಿಚಾರವಾಗಿ ಟ್ವೀಟ್ ಮಾಡಿರುವ ರೂಪೀಂದರ್, "ಕಳೆದ ಕೆಲವಾರು ತಿಂಗಳುಗಳಿಂದ ನಾನು ನಿಸಂಶಯವಾಗಿ ಉತ್ತಮ ದಿನಗಳನ್ನು ಕಂಡಿದ್ದೇನೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನನ್ನ ತಂಡದ ಸಹ ಆಟಗಾರರೊಂದಿಗೆ ಪೋಡಿಯಂನಲ್ಲಿ ನಿಲ್ಲುವಾಗಿನ ಸಿಕ್ಕಿದ ಅದ್ಭುತ ಅನುಭವ ನನ್ನ ಬದುಕಿನ ಕೊನೆವರೆಗೂ ಇರುತ್ತದೆ. ಯುವ ಆಟಗಾರರು ಭಾರತೀಯ ತಂಡದಲ್ಲಿ ಹೊಸ ಖುಷಿಯನ್ನು ಎಂಜಾಯ್ ಮಾಡಲು ದಾರಿ ಮಾಡಿಕೊಡುವುದಕ್ಕೆ ಇದು ಸಕಾಲ ಎಂದು ನನಗನ್ನಿಸುತ್ತಿದೆ. ನಾನು ಈ 13 ವರ್ಷಗಳಲ್ಲಿ ಭಾರತೀಯ ತಂಡ ಪ್ರತಿನಿಧಿಸಿ ಅನುಭವಿಸಿದ ಖುಷಿ ಉಳಿದ ಆಟಗಾರರಿಗೂ ಸಿಗಲಿ. ಅದಕ್ಕೆ ದಾರಿ ಬಿಟ್ಟುಕೊಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
PublicNext
30/09/2021 03:14 pm