ಶಾರ್ಜಾ: ನಿತೀಶ್ ರಾಣಾ ಹಾಗೂ ಶುಭ್ಮನ್ ಗಿಲ್ ತಾಳ್ಮೆಯ ಬ್ಯಾಟಿಂಗ್ ಸಹಾಯದಿಂದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಶಾರ್ಜಾ ಮೈದಾನದಲ್ಲಿ ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 41ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಡೆಲ್ಲಿ ತಂಡವು 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲು ಶಕ್ತವಾಗಿತ್ತು. 128 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕೆಕೆಆರ್ 10 ಎಸೆತಗಳು ಬಾಕಿ ಇರುವಂತೆ 7 ವಿಕೆಟ್‌ಗಳಿಂದ 130 ರನ್ ಗಳಿಸಿ ಗೆಲುವು ಸಾಧಿಸಿದೆ. ಕೆಕೆಆರ್ ಪರ ನಿತೀಶ್ ರಾಣಾ ಅಜೇಯ 36 ರನ್, ಶುಭ್ಮನ್ ಗಿಲ್ 30 ರನ್ ಹಾಗೂ ಸುನಿಲ್ ನರೈನ್ 21 ರನ್ ಗಳಿಸಿದರು.
ಇದಕ್ಕೂ ಮುನ್ನ ಡೆಲ್ಲಿ ತಂಡವು ಸ್ಟೀವ್ ಸ್ಮಿತ್ 39 ರನ್, ಶಿಖರ್ ಧವನ್ 24 ರನ್ ಹಾಗೂ ನಾಯಕ ರಿಷಭ್ ಪಂತ್ 39 ರನ್ ಸಹಾಯದಿಂದ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು. ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಯಾವುದೇ ಆಟಗಾರರು ಒಂದೇ ಒಂದು ಸಿಕ್ಸ್ ಸಿಡಿಸದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
PublicNext
28/09/2021 07:14 pm