ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಭದ್ರತಾ ಕಾರಣದಿಂದ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಪಿಸಿಬಿ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಅಧ್ಯಕ್ಷ ರಮೀಜ್ ರಾಜಾ, "ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿರುವುದರಿಂದ ನಾನು ತೀವ್ರ ನಿರಾಶೆಗೊಂಡಿದ್ದೇನೆ. ಆದರೆ ಅದನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಯಾಕೆಂದರೆ ಈ ಪಾಶ್ಚಿಮಾತ್ಯ ರಾಷ್ಟ್ರಗಳು ಒಂದುಗೂಡುತ್ತವೆ ಮತ್ತು ಪರಸ್ಪರ ಬೆಂಬಲಿಸಲು ಪ್ರಯತ್ನಿಸುತ್ತವೆ ಎಂಬುದು ತಿಳಿದಿತ್ತು" ಎಂದು ಹೇಳಿಕೊಂಡಿದ್ದಾರೆ.
'ಸದ್ಯಕ್ಕೆ ನಾವು ವಿಶ್ವಕಪ್‌ಗೆ ಹೋಗುತ್ತೇವೆ. ಮೊದಲು ಭಾರತ ನಮ್ಮ ಟಾರ್ಗೆಟ್ ಆಗಿರುತ್ತಿತ್ತು. ಈಗ ಮತ್ತೆರಡು ತಂಡಗಳು ಸೇರಿಕೊಂಡಿವೆ. ಅವು ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್. ಹಾಗಾಗಿ ನಿಮ್ಮ ಬಲವನ್ನು ಹೆಚ್ಚಿಸಿಕೊಳ್ಳಿ ಮತ್ತು ನಾವು ಅಲ್ಲಿಗೆ ಸೋಲಲು ಹೋಗುತ್ತಿಲ್ಲ ಎನ್ನುವ ಮನಸ್ಥಿತಿ ಬೆಳಸಿಕೊಳ್ಳಿ. ಯಾಕೆಂದರೆ ಅವರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅದಕ್ಕಾಗಿ ಮೈದಾನದಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳೋಣ' ಎಂದು ರಾಜಾ ತಮ್ಮ ಪಾಕಿಸ್ತಾನ ತಂಡಕ್ಕೆ ಕರೆ ನೀಡಿದ್ದಾರೆ.
PublicNext
22/09/2021 08:40 am