ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND VS ENG 4th Test: ಅಬ್ಬರಿಸಿದ ಶಾರ್ದೂಲ್- ಚಹಾ ವಿರಾಮಕ್ಕೆ ಭಾರತ 445/8

ಓವಲ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಸಂಜೆ ಚಹಾ ವಿರಾಮದ ಹೊತ್ತಿಗೆ ಭಾರತ ತಂಡವು ಎಂಟು ವಿಕೆಟ್ ನಷ್ಟಕ್ಕೆ 445 ರನ್ ಗಳಿಸಿದೆ. ಇದರೊಂದಿಗೆ 346 ರನ್‌ಗಳ ಮುನ್ನಡೆ ಗಳಿಸಿದೆ. ಈ ಮೂಲಕ ಪಂದ್ಯವು ರೋಚಕ ಹಂತವನ್ನು ತಲುಪಿದೆ.

ನಾಯಕ ವಿರಾಟ್ ಕೊಹ್ಲಿ 44 ರನ್, ಶಾರ್ದೂಲ್ ಠಾಕೂರ್ 60 ರನ್ ಹಾಗೂ 50 ರನ್ ಗಳಿಸಿ ಔಟಾದರು. ಈಗ ಕ್ರೀಸಿನಲ್ಲಿರುವ ಉಮೇಶ್ ಯಾದವ್ (13* ರನ್) ಹಾಗೂ ಜಸ್‌ಪ್ರೀತ್ ಬುಮ್ರಾ (19*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತದ 191 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿತ್ತು. ಈ ಮೂಲಕ 99 ರನ್‌ಗಳ ಮುನ್ನಡೆ ಗಳಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ.

Edited By : Vijay Kumar
PublicNext

PublicNext

05/09/2021 08:37 pm

Cinque Terre

46.74 K

Cinque Terre

0