ಟೋಕಿಯೊ: ಪ್ಯಾರಾಲಂಪಿಕ್ಸ್ ಭಾರತದ ಹರ್ವಿಂದರ್ ಸಿಂಗ್ ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಪ್ಯಾರಾ ಕ್ರೀಡೆಗಳ ಈ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶ್ರೇಯಕ್ಕೆ ಭಾಜನರಾಗಿದ್ದಾರೆ. ಸೆಮಿಫೈನಲ್ ನಲ್ಲಿ ಅಮೆರಿಕದ ಕೆವಿನ್ ಮಥರ್ ಎದುರು 6-4 ಅಂತರದಿಂದ ಮಣಿದ ಸಿಂಗ್, ಕಂಚಿನ ಪದಕಕ್ಕಾಗಿ ಕೊರಿಯಾದ ಕಿಮ್ ಮಿನ್ ಸು ಜೊತೆ ಸೆಣಸಿದರು. ಕಿಮ್ ವಿರುದ್ಧ 6-5 ಅಂತರದ ಗೆಲುವು ಸಾಧಿಸಿದರು.
ಸಿಂಗ್ ಎದುರು ಸೆಮಿಯಲ್ಲಿ ಜಯ ಸಾಧಿಸಿದ ಮಥರ್ ಫೈನಲ್ ನಲ್ಲಿ ಚೀನಾದ ಝಾವೋ ಎಲ್ ಎದುರು 6-4 ಅಂತರದಿಂದ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ವಿಶ್ವದ ನಂ.23 ಶ್ರೇಯಾಂಕದ ಸಿಂಗ್ ಪಂಜಾಬ್ ನವರು. 2018ರ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.
PublicNext
04/09/2021 09:16 am