ಓವಲ್: ರನ್ ಮೆಷಿನ್ ಖ್ಯಾತಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಓವಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ನಡೆಯುತ್ತಿದ್ದು, ತಮ್ಮ 490ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ಸಾವಿರ ರನ್ ಗಳಿಸಿದ್ದಾರೆ. ಈವರೆಗೆ ಏಳು ಮಂದಿ 23 ಸಾವಿರ ರನ್ ಗಳಿಸಿದ್ದು, ಪಂದ್ಯಗಳನ್ನು ಆಧರಿಸಿ ಶ್ರೇಯಾಂಕ ನೀಡುವುದಾದರೆ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಪ್ರತಿ ಪಂದ್ಯಕ್ಕೆ ಸರಾಸರಿ 55 ರನ್ ಗಳಿಸಿದ್ದು, ಈ ಪಂದ್ಯಗಳಲ್ಲಿ 70 ಶತಕಗಳು ಮತ್ತು 115 ಅರ್ಧಶತಕಗಳೂ ಇವೆ.
23 ಸಾವಿರ ರನ್ ಗಳಿಸಿದ ಆಟಗಾರರು- ತೆಗೆದುಕೊಂಡ ಇನ್ನಿಂಗ್ಸ್
1. ವಿರಾಟ್ ಕೊಹ್ಲಿ (490 ಇನ್ನಿಂಗ್ಸ್)
2. ಸಚಿನ್ ತೆಂಡೂಲ್ಕರ್ (522 ಇನ್ನಿಂಗ್ಸ್)
3. ರಿಕ್ಕಿ ಪಾಂಟಿಂಗ್ (544 ಇನ್ನಿಂಗ್ಸ್)
4. ಜಾಕಸ್ ಕಾಲಿಸ್ (551 ಇನ್ನಿಂಗ್ಸ್)
5. ಕುಮಾರ್ ಸಂಗಕ್ಕಾರ (568 ಇನ್ನಿಂಗ್ಸ್)
6. ರಾಹುಲ್ ದ್ರಾವಿಡ್ (576 ಇನ್ನಿಂಗ್ಸ್)
7. ಮಹೇಲಾ ಜಯವರ್ಧನೆ (645 ಇನ್ನಿಂಗ್ಸ್)
PublicNext
02/09/2021 06:09 pm