ನವದೆಹಲಿ : ಸುಮಿತ್ ಅಂಟಿಲ್ ಹರ್ಯಾಣದ ಸೋನೆಪತ್ ಮೂಲದವರು. 2015ರಲ್ಲಿ ಬೈಕ್ ಅಪಘಾತದಲ್ಲಿ ತಮ್ಮ ಎಡಗಾಲಿನ ಮಂಡಿ ಕೆಳಗಿನ ಭಾಗವನ್ನು ಕಳೆದುಕೊಂಡರು. ಅಪಘಾತಕ್ಕೂ ಮುನ್ನ ಕುಸ್ತಿಪಟುವಾಗಿದ್ದ ಸುಮಿತ್, ತಮ್ಮ ಗ್ರಾಮದ ಪ್ಯಾರಾ ಅಥ್ಲೀಟ್ ಒಬ್ಬರ ಸಲಹೆಯಂತೆ 2018ರಲ್ಲಿ ಜಾವೆಲಿನ್ ಥ್ರೋ ಆರಂಭಿಸಿದರು.
ಸದ್ಯ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶ್ವದಾಖಲೆಯ 68.55 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ದೇಶಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 2019ರಲ್ಲಿ ಇಟಲಿಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾ ಪ್ರಿಯಲ್ಲಿ ಬೆಳ್ಳಿ ಗೆದ್ದ ಅವರು, ಅದೇ ವರ್ಷ ಪ್ಯಾರಿಸ್ ಓಪನ್ ಹ್ಯಾಂಡಿಸ್ಪೋರ್ಟ್ ಹಾಗೂ ದುಬೈಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ರಜತ ಪದಕ ಜಯಿಸಿದರು.
PublicNext
31/08/2021 02:46 pm