ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಮಾಂತ್ರಿಕ ನೀರಜ್ ಚೋಪ್ರಾ ಅವರು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸಾಧನೆಗೈದ ಭಾರತೀಯ ಕ್ರೀಡಾಪಟುಗಳ ಮೆಚ್ಚುಗೆಯ ಮಾತನಾಡಿದ್ದಾರೆ.
ಪ್ಯಾರಾಲಿಂಕ್ಸ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಅನೇಕ ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ. ನೀವೆಲ್ಲ ನಮ್ಮ ಗೆಲುವನ್ನು ಸಂಭ್ರಮಿಸಿದ್ದೀರಿ. ಅದರಂತೆ ಅವರ ಗೆಲುವನ್ನು ಖುಷಿಯಿಂದ ಸಂಭ್ರಮಿಸಿ. ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿ. ನಿಮ್ಮ ಪ್ರೋತ್ಸಾಹ ಅವರೆಲ್ಲರಿಗೂ ಅವಶ್ಯಕ. ಪ್ಯಾರಾಲಿಂಪಿಕ್ಸ್‌ನ ಎಲ್ಲ ಕ್ರೀಡೆಗಳನ್ನು ವೀಕ್ಷಿಸಿ ಎಂದು ಮನವಿ ದೇಶದ ಕ್ರೀಡಾಪ್ರೇಮಿಗಳಿಗೆ ಮನವಿ ಮಾಡಿದ್ದಾರೆ.
PublicNext
31/08/2021 01:40 pm