ಟೋಕಿಯೋ : ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಜಯಿಸಿದ್ದಾರೆ.. 44.38 ಮೀಟರ್ ಎಸೆದು ಭಾರತಕ್ಕೆ 5ನೇ ಪದಕ ತಂದುಕೊಟ್ಟಿದ್ದಾರೆ.
ಡಿಸ್ಕಸ್ ಥ್ರೋ ಅಂತಿಮ ಎಫ್56 ವಿಭಾಗದಲ್ಲಿ ಸ್ಪರ್ಧಿಸಿದ ಯೋಗೇಶ್ 44.38 ಮೀ.ನ ಅತ್ಯುತ್ತಮ ಪ್ರಯತ್ನದೊಂದಿಗೆ 2 ನೇ ಸ್ಥಾನಕ್ಕೆ ಪಡೆದಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಬೆಳ್ಳಿ ಪದಕ ಗೆದ್ದ ಯೋಗೇಶ್ ಅವರನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಬೆಳ್ಳಿ ಪದಕ ಗೆಲ್ಲುತ್ತಲೇ ಯೋಗೇಶ್ ಮನೆಯಲ್ಲಿ ಹರ್ಷೋದ್ಘಾರ ಮೊಳಗಿದೆ.
PublicNext
30/08/2021 10:18 am