ಲೀಡ್ಸ್: ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆಯ ಬಳಿಕ ಟೀಂ ಇಂಡಿಯಾದ ಉದಯೋನ್ಮುಖ ಕ್ರಿಕೆಟಿಗ ಮಹಮ್ಮದ್ ಸಿರಾಜ್ ಬಳಿ ಚೆಂಡು ಎಸೆದು ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ.
ಲೀಡ್ಸ್ ಮೈದಾನದಲ್ಲಿ ಬುಧವಾರ ಆರಂಭವಾದ 3ನೇ ಟೆಸ್ಟ್‌ನ ಮೊದಲ ದಿನದ ಪಂದ್ಯದಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದ್ದು, ಇಂಗ್ಲೆಂಡ್ ಬೌಲರ್‌ಗಳ ಅಬ್ಬರಕ್ಕೆ ಕೇವಲ 78 ರನ್‌ಗೆಳಿಗೆ ಆಲೌಟ್ ಆಯಿತು. ಬಳಿಕ ಇಂಗ್ಲೆಂಡ್ ತಂಡವು ತನ್ನ ಇನ್ನಿಂಗ್ಸ್ ಆರಂಭಿಸಿತು. ಈ ವೇಳೆ ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಚಾರವನ್ನು ಪಂದ್ಯ ಮುಗಿದ ಬಳಿಕ ಟೀಮ್‌ಮೇಟ್ ರಿಷಬ್ ಪಂತ್ ಬಹಿರಂಗಪಡಿಸಿದ್ದಾರೆ.
ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಅವರಿಗೆ ಆಂಗ್ಲ ಕ್ರಿಕೆಟ್ ಅಭಿಮಾನಿಗಳು ಎಸೆದ ವಸ್ತುವನ್ನು ಹೊರಗೆಸೆಯುವಂತೆ ಕೋಪದಿಂದ ಸೂಚಿರುವುದನ್ನು ಕ್ಯಾಮರಾಗಳು ತೋರಿಸಿವೆ. ಇಂಥ ಕೃತ್ಯಗಳಿಗೆ ಸೊಪ್ಪು ಹಾಕದ ಸಿರಾಜ್, ನಾವು ಈಗಾಗಲೇ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದೇವೆ ಎನ್ನುವುದನ್ನು ಕೈಸನ್ನೆಯ ಮೂಲಕ ಆಕರ್ಷಕವಾಗಿ ತೋರಿಸಿ, ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
PublicNext
26/08/2021 08:32 am