ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಸ್ಸಿಗೆ ಪಿಎಸ್‌ಜಿ ಕ್ಲಬ್‌ನಿಂದ ಭರ್ಜರಿ ಸ್ವಾಗತ

ಪ್ಯಾರಿಸ್: ಬಾರ್ಸಿಲೋನಾ ಎಫ್‌ಸಿ ತೊರೆದು ಪ್ಯಾರಿಸ್ ಸೈಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಸೇರಿರುವ ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಿಂದ ಬಾರ್ಸಿಲೋನಾ ತಂಡದ ಭಾಗವಾಗಿದ್ದರು. ಅಲ್ಲದೆ ದಾಖಲೆಯ 682 ಗೋಲುಗಳನ್ನು ಗಳಿಸಿದ್ದರು. ಆದರೆ ಈಗ ಅನಿವಾರ್ಯವಾಗಿ ಬಾರ್ಸಿಲೋನಾ ತಂಡವನ್ನು ತೊರೆದು ಪಿಎಸ್‌ಜಿ ತಂಡವನ್ನು ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ 30 ನಂಬರ್ ಜೆರ್ಸಿಯನ್ನು ಲಯೊನೆಲ್ ಮೆಸ್ಸಿ ಅನಾವರಣಗೊಳಿಸಿದರು. ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಮುಂತಾದ ಆಟಗಾರರೊಂದಿಗೆ ಮೆಸ್ಸಿ ಕಣಕ್ಕಿಳಿಯಲಿದ್ದಾರೆ. ಇದು ಕೂಡಾ ಫುಟ್‌ಬಾಲ್ ಪ್ರೇಮಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮೆಸ್ಸಿ, ಚಾಂಪಿಯನ್ಸ್ ಲೀಗ್ ಗೆಲ್ಲುವುದೇ ಮೊದಲ ಗುರಿ. ಅದಕ್ಕಾಗಿಯೇ ನಾನಿಲ್ಲಿದ್ದೇನೆ ಎಂದಿದ್ದಾರೆ.

Edited By : Vijay Kumar
PublicNext

PublicNext

12/08/2021 01:46 pm

Cinque Terre

83.52 K

Cinque Terre

0

ಸಂಬಂಧಿತ ಸುದ್ದಿ