ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ENG VS IND 1st Test: ಭಾರತದ ಗೆಲುವಿಗೆ ನೀರೆರೆದ ಮಳೆರಾಯ

ನಾಟಿಂಗ್‌ಹ್ಯಾಮ್: ಉತ್ತಮ ಆರಂಭ ನೀಡಿ ಗೆಲುವಿನ ಉತ್ಸಾಹದಲ್ಲಿದ್ದ ಭಾರತಕ್ಕೆ ಮಳೆರಾಯ ನಿರಾಸೆ ಮೂಡಿಸಿದ್ದಾನೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ನೀರಸವಾಗಿ ಅಂತ್ಯಕಂಡಿದೆ. ಸಾಕಷ್ಟು ಕುತೂಹಲವನ್ನು ಮೂಡಿಸಿದ್ದ ಅಂತಿಮ ದಿನದಾಟದ ಆರಂಭಕ್ಕೆ ಮಳೆ ಸ್ವಲ್ಪವೂ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ. ಹೀಗಾಗಿ ಪಂದ್ಯದಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಸನಿಹಕ್ಕೆ ಬಂದಿದ್ದ ಭಾರತ ತಂಡಕ್ಕೆ ಮಳೆ ನಿರಾಸೆ ಮೂಡಿಸಿದೆ.

ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ ಕೇವಲ 157 ರನ್‌ಗಳ ಅವಶ್ಯಕತೆಯಿತ್ತು. 9 ವಿಕೆಟ್‌ಗಳನ್ನು ಉಳಿಸಿಕೊಂಡಿದ್ದ ಭಾರತ ಪಂದ್ಯದಲ್ಲಿ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿತ್ತು. ಆದರೆ ಅಂತಿಮ ದಿನ ಮಳೆ ಪಂದ್ಯಕ್ಕೆ ಸ್ಲಲ್ಪವೂ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ಅಂತಿಮ ದಿನ ಒಂದು ಎಸೆತ ಕಾಣದೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.

ಇಂಗ್ಲೆಂಡ್‌:

ಮೊದಲ ಇನ್ನಿಂಗ್ಸ್‌– 183

ಎರಡನೇ ಇನ್ನಿಂಗ್ಸ್‌– 303

ಭಾರತ:

ಮೊದಲ ಇನ್ನಿಂಗ್ಸ್‌– 278

ಎರಡನೇ ಇನ್ನಿಂಗ್ಸ್‌ – 52/1

Edited By : Vijay Kumar
PublicNext

PublicNext

08/08/2021 09:28 pm

Cinque Terre

69.34 K

Cinque Terre

7

ಸಂಬಂಧಿತ ಸುದ್ದಿ