ಟೋಕಿಯೋ: ಜಾವಲಿನ್ ಎಸೆತದಲ್ಲಿ ಬಾರತಕ್ಕೆ ಇದೇ ಮೊಟ್ಟ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಟ್ಟ ಹರಿಯಾಣ ಮೂಲದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಿನ್ನದ ಪದಕ ಸ್ವೀಕರಿಸಿದ ಅವರು ರಾಷ್ಟ್ರಗೀತೆ ವೇಳೆ ಭಾವುಕಾರಗಿ ಕಣ್ಣೀರಿಟ್ಟಿದ್ದಾರೆ. ನನ್ನ ಈ ಗೆಲುವು ಬಾರತದ ಮಾಜಿ ಅಥ್ಲೀಟ್ ದಿವಂಗತ ಮಿಲ್ಖಾ ಸಿಂಗ್ ಅವರಿಗೆ ಅರ್ಪಿತ ಎಂದಿದ್ದಾರೆ.
ತಮ್ಮ ಸಾಧನೆ ಬಳಿಕ ನೀರಜ್ ಚೋಪ್ರಾ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ನಾನು ಚಿನ್ನದ ಪದಕದ ಬಗ್ಗೆ ಚಿಂತಿಸಿರಲಿಲ್ಲ. ನಾನು ಒಲಿಂಪಿಕ್ ದಾಖಲೆಯನ್ನು ಮುರಿಯಲು ಬಯಸಿದ್ದೆ, ಹೀಗಾಗಿ ಇದು ಸಾಧ್ಯವಾಗಿದೆ. ಈ ದಿನ ವಿಶೇಷವಾಗಿ ಏನಾದರೂ ಮಾಡಲು ಬಯಸಿದ್ದೇನೆ ಎಂದಿದ್ದಾರೆ.
ನನ್ನ ಗೋಲ್ಡ್ ಮೆಡಲ್ ಅನ್ನು ಮಿಲ್ಕಾ ಸಿಂಗ್ ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಗೋಲ್ಡ್ ಮೆಡಲ್ ಜೊತೆ ವೈಯಕ್ತಿಕವಾಗಿ ಮಿಲ್ಖಾ ಸಿಂಗ್ ಅವರನ್ನು ಭೇಟಿಯಾಗಲು ಬಯಸಿದ್ದೆ. ಪಿ.ಟಿ.ಉಷಾ ಹಾಗೂ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸಮೀಪಕ್ಕೆ ಬಂದ ಇತರ ಭಾರತೀಯ ಕ್ರೀಡಾಪಟುಗಳಿಗೆ ಈ ಚಿನ್ನದ ಪದಕವನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
PublicNext
07/08/2021 10:53 pm