ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೋಕಿಯೋ ಒಲಿಂಪಿಕ್ಸ್: ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷ ಹಾಕಿ ತಂಡಕ್ಕೆ ನಿರಾಸೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 41 ವರ್ಷಗಳ ಸುದೀರ್ಘ ಸಮಯದ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಪುರುಷರ ಹಾಕಿ ತಂಡ ಉತ್ತಮ ಪೈಪೋಟಿಯೊಂದಿಗೆ ಬೆಲ್ಜಿಯಂ ವಿರುದ್ಧ 2-5ರ ಅಂತರದಿಂದ ಸೋಲನುಭವಿಸಿದೆ. ಆದರೆ ಭಾರತಕ್ಕೆ ಇನ್ನೂ ಪದಕದ ನಿರೀಕ್ಷೆಯಿದೆ. ಸೆಮಿಫೈನಲ್‌ನಲ್ಲಿ ಸೋತ ಹಾಕಿ ತಂಡಕ್ಕೆ ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಯಲಿದೆ.

41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ 2016ರ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬೆಲ್ಜಿಯಂ ತಂಡ ಈ ಬಾರಿ ಸೆಮಿಫೈನಲ್‌ನಲ್ಲಿ ಮುನ್ನಡೆ ಪಡೆದುಕೊಂಡಿದೆ.

ಭಾರತ ಪರ 11ನೇ ನಿಮಿಷದಲ್ಲಿ ಮನ್‌ಪ್ರೀತ್‌ ಸಿಂಗ್‌ ಮೊದಲನೇ ಗೋಲ್ ಬಾರಿಸಿದರು. 13ನೇ ನಿಮಿಷದಲ್ಲಿ ಸಂದೀಪ್ ಸಿಂಗ್ ಗೋಲ್ ಬಾರಿಸಿ ಮೊದಲ ಕ್ವಾರ್ಟರ್ ಹೊತ್ತಿಗೆ ಭಾರತಕ್ಕೆ ಮುನ್ನಡೆ ನೀಡಿದ್ದರು. ಆದರೆ ಮುಂದಿನ ಕ್ವಾರ್ಟರ್‌ಗಳಲ್ಲಿ ಭಾರತಕ್ಕೆ ಗೋಲ್ ದಾಖಲಾಗಲಿಲ್ಲ. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-1ರ ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡ ಸ್ಪೇನ್ ವಿರುದ್ಧ 3-1ರ ಅಂತರದಿಂದ ಜಯ ಗಳಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಸೋಲಾಗಿದೆ.

Edited By : Nagaraj Tulugeri
PublicNext

PublicNext

03/08/2021 09:41 am

Cinque Terre

32.15 K

Cinque Terre

1

ಸಂಬಂಧಿತ ಸುದ್ದಿ