ಟೋಕಿಯೋ: ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿ ಲವ್ಲಿನಾ ಸೆಮಿಫೈನಲ್ ಪ್ರವೇಶಿಸಿದ್ದು, ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ.
ಮಹಿಳೆಯರ ವೆಲ್ಟರ್ ವೇಟ್ 64-69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಲವ್ಲಿನಾ ಅವರು ಚೈನೀಸ್ ತೈಪೆ(ತೈವಾನ್) ಚಿನ್ ಚೀನ್ ಅವರನ್ನು 4-1 ಅಂಕದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲರಿಗೂ ಪದಕ ಸಿಗಲಿದೆ. ಸೋತ ಇಬ್ಬರು ಸ್ಪರ್ಧಿಗಳಿಗೆ ಕಂಚಿನ ಪದಕವನ್ನು ನೀಡಲಾಗುತ್ತದೆ. ಜುಲೈ 24 ರಂದು ಮೀರಾಬಾಯಿ ಚಾನು ಅವರು ವೇಟ್ ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.
PublicNext
30/07/2021 11:02 am