ನವದೆಹಲಿ: ಕರ್ನಾಟಕದ ಯುವ ಆಲ್ರೌಂಡರ್ ಗಳಾದ ಸಿ.ಪ್ರತ್ಯುಷಾ ಹಾಗೂ ಮೋನಿಕಾ ಸಿ ಪಟೇಲ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ನಿಗದಿತ ಓವರ್ ಗಳ ಸರಣಿಗೆ ಭಾರತ ಮಹಿಳಾ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರತ್ಯುಷಾ, ಮೋನಿಕಾ ಸಿ ಪಟೇಲ್ ಸೇರಿದಂತೆ 6 ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಆಟಗಾರ್ತಿಯರಾದ ಕನ್ನಡತಿ ವೇದಾ ಕೃಷ್ಣಮೂರ್ತಿ, ಆಲ್ರೌಂಡರ್ ಶಿಖಾ ಪಾಂಡೆ ಹಾಗೂ ವಿಕೆಟ್ ಕೀಪರ್ ತಾನಿಯಾ ಭಾಟಿಯಾ, ಅನುಜ್ ಪಾಟೀಲ್ ಗೆ ತಂಡದಿಂದ ಕೊಕ್ ನೀಡಲಾಗಿದೆ.
ಮಾರ್ಚ್ 7 ರಿಂದ 17 ರವರೆಗೆ 5 ಏಕದಿನ ಹಾಗೂ ಮಾರ್ಚ್ 20 ರಿಂದ 23 ರವರೆಗೆ 3 ಟಿ20 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಲಖನೌದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲೆ ನಡೆಯಲಿವೆ. ಮಿಥಾಲಿ ರಾಜ್ ಹಾಗೂ ಹರ್ಮಾನ್ಪ್ರೀತ್ ಕೌರ್ ಕ್ರಮವಾಗಿ ಏಕದಿನ ಹಾಗೂ ಟಿ20 ತಂಡಗಳನ್ನು ಮುನ್ನಡೆಸಲಿದ್ದಾರೆ.
ಕನ್ನಡತಿಯರಾದ ಸಿ.ಪ್ರತ್ಯುಷಾ, ಮೋನಿಕಾ ಸಿ ಪಟೇಲ್ ಎರಡೂ ತಂಡಗಳಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದರೆ, ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಎರಡೂ ತಂಡಗಳಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ 22 ವರ್ಷದ ಸಿ.ಪ್ರತ್ಯುಷಾ, ರಾಜ್ಯ ತಂಡದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು.
ಟೂರ್ನಿ ವೇಳಾಪಟ್ಟಿ
ಏಕದಿನ ಸರಣಿ
ದಿನಾಂಕ, ಪಂದ್ಯ,
ಮಾ.7, ಮೊದಲ ಏಕದಿನ,
ಮಾ.9, 2ನೇ ಏಕದಿನ,
ಮಾ.12, 3ನೇ ಏಕದಿನ,
ಮಾ.14, 4ನೇ ಏಕದಿನ,
ಮಾ.17, 5ನೇ ಏಕದಿನ,
ಟಿ20 ಸರಣಿ
ದಿನಾಂಕ, ಪಂದ್ಯ,
ಮಾ.20, ಮೊದಲ ಟಿ20,
ಮಾ.21, 2ನೇ ಟಿ20,
ಮಾ.23, 3ನೇ ಟಿ20,
PublicNext
28/02/2021 08:58 am