ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ವಿಶೇಷ ಸಾಧನೆ ಮಾಡಿದ್ದಾರೆ.
ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 99ನೇ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ತೋರಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಡೇನಿಯಲ್ ಲಾರೆನ್ಸ್ ವಿಕೆಟ್ ಪಡೆಯುವ ಮೂಲಕ ಇಶಾಂತ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದಕ್ಕೂ ಮೊದಲು ಭಾರತ ಮಾಜಿ ನಾಯಕ ಕಪಿಲ್ ದೇವ್ (434 ವಿಕೆಟ್), ಜಹೀರ್ ಖಾನ್ (311) ಈ ದಾಖಲೆ ನಿರ್ಮಿಸಿದ್ದರು.
ಈ ಸಾಧನೆ ಸಾಲಿನಲ್ಲಿ ಅನಿಲ್ ಕುಂಬ್ಳೆ (619), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ರವಿಚಂದ್ರನ್ ಅಶ್ವಿನ್ (382), ಝಹೀರ್ ಖಾನ್ (311) ಮತ್ತು ಇಶಾಂತ್ ಶರ್ಮಾ (300*) ಇದ್ದಾರೆ.
PublicNext
08/02/2021 02:49 pm