ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಗ್ಲೆಂಡ್ ವಿರುದ್ಧ ಸೆಣಸಾಡಲು ಸಜ್ಜಾಗಿದ್ದಾರೆ ರಿ‍ಷಭ್ ಪಂತ್

ಚೆನ್ನೈ: ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1ರ ಗೆಲುವು ದಾಖಲಿಸುವಲ್ಲಿ ಯುವ ಆಟಗಾರ ರಿಷಭ್ ಪಂತ್ ಪಾತ್ರ ಪರಿಣಾಮಕಾರಿಯಾಗಿತ್ತು. ಹೀಗಾಗಿ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್‌ ಸಾಹ ಅವರಿಗಿಂತ ಆಕ್ರಮಣಕಾರಿ ಆಟವಾಡುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ಗೆ ಮೊದಲ ಆದ್ಯತೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಫೆಬ್ರವರಿ 5ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಿಕ ಎರಡು ಪಂದ್ಯಗಳು ನಡೆಯಲಿವೆ. ಈ ಟೆಸ್ಟ್‌ ಸರಣಿಯ ಸೋಲು-ಗೆಲುವು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಪರಿಣಾಮ ಬೀರಲಿದೆ.

'ಮೊದಲ ಟೆಸ್ಟ್‌ನಲ್ಲಿ ರಿಷಭ್ ಪಂತ್ ಶುರುಮಾಡಲಿದ್ದಾರೆ. ಅವರು ಯಾವಾಗಲೂ ಮಾನಸಿಕವಾಗಿ ಫ್ರೀಯಾಗಿರುತ್ತಾರೆ. ಚೆನ್ನಾಗಿ ಆಡುತ್ತಾರೆ. ಆಟದ ಎಲ್ಲಾ ಆಯಾಮಗಳಲ್ಲೂ ಪಂತ್ ಪರಿಶ್ರಮ ಪಡುತ್ತಾರೆ,' ಎಂದು ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಗುರುವಾರ (ಫೆಬ್ರವರಿ 4) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

04/02/2021 10:10 pm

Cinque Terre

59 K

Cinque Terre

0

ಸಂಬಂಧಿತ ಸುದ್ದಿ